ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯಲ್ಲಿ ಹಿಂದೂಳಿದ ವರ್ಗದ ಮತದಾರರನ್ನು ಓಲೈಸುತ್ತಿರುವ ಬಿಜೆಪಿ ಪಕ್ಷ ಹಿಂದೂಳಿದ ವರ್ಗದವರ‍್ಯಾರನ್ನೂ ಅಭ್ಯರ್ಥಿಯನ್ನಾಗಿಸಿಲ್ಲ. ಓಟಿಗಾಗಿ ಮಾತ್ರ ಹಿಂದೂಳಿದ ವರ್ಗದವರನ್ನು ದಾಳವಾಗಿಸಿಕೊಂಡು ಇಡೀ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ. ಹಿಂದುತ್ವ, ಸೇನೆ ಮುಂತಾದ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸ್ವಂತ ವರ್ಚಸ್ಸಿಲ್ಲದೇ ಹೆಣಗಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದರು.
ಅವರು ಸೋಮವಾರ ಕುಂದಾಪುರದಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಕರಾವಳಿಯ ನಾಲ್ಕು ಸಂಸದರ ಪೈಕಿ ಮೂರು ಸೀಟನ್ನು ಹಿಂದೂಳಿದ ವರ್ಗದವರಿಗೆ ನೀಡಿದೆ. ನರೇಂದ್ರ ಮೋದಿ ವಾರಣಾಸಿಯಲ್ಲಿ ಸ್ವರ್ಧೆ ಮಾಡುತ್ತಿದ್ದಾರೆ. ಆದರೆ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಲ್ಲಿಯೂ ಮೋದಿಗೆ ಓಟು ನೀಡಿ ಎನ್ನುತ್ತಿದ್ದಾರೆ. ಮೋದಿಗೆ ಓಟು ನೀಡಿ ಎನ್ನುವ ಅಭ್ಯರ್ಥಿಗಳಿಗೆ ಸ್ವಂತ ವರ್ಚಸ್ಸಿಲ್ಲವೇ. ಐದು ವರ್ಷ ಉಡುಪಿ ಚಿಕ್ಕಮಂಗಳೂರಿನಲ್ಲಿ ಅಭ್ಯರ್ಥಿಯಾಗಿದ್ದವರು ತಮ್ಮ ಹಾಗೂ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದನ್ನು ಬಿಟ್ಟು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಚಾಳಿಯನ್ನು ಖಂಡಿಸಬೇಕಿದೆ. ಹಿಂದೂತ್ವ, ಶ್ರೀರಾಮ ಮೊದಲಾದ ವಿಚಾರಗಳ ಮೇಲೆ ಚುನಾವಣೆ ಎದುರಿಸುವ ಬಿಜೆಪಿ ಈ ಭಾರಿ ಸೇನೆಯ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಎದುರಿಸುವ ನಾಚಿಕೆಯ ಸಂಗತಿ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪ್ರಮೋದ್ ಮಧ್ವರಾಜ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕರಾವಳಿ ಭಾಗದ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿರುವುದಲ್ಲದೇ ಮೀನುಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಯುವಕರು, ಅನುಭವಿಗಳು ಹಾಗೂ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಮಧ್ವರಾಜ್ ಅವರು ಸಂಸತ್ತಿನಲ್ಲಿಯೂ ಕರಾವಳಿ ಜನರ ಧ್ವನಿಯಾಗಬಲ್ಲ ಸಮರ್ಥರಾಗಿದ್ದಾರೆ. ಕರಾವಳಿಯಲ್ಲಿ ಒಮ್ಮತದ ಮೈತ್ರಿ ಅಭ್ಯರ್ಥಿ ಸ್ವರ್ಧಿಸುತ್ತಿದ್ದು ಉಡುಪಿ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ವರ್ಧಿಸುತ್ತಿರುವ ಪ್ರಮೋದ್ ಮಧ್ವರಾಜ್ ಹಾಗೂ ಮಧು ಬಂಗಾರಪ್ಪ ಅವರನ್ನು ಬೆಂಬಲಿಸುವಂತೆ ವಿನಂತಿಸಿದರು.
ಮೀನುಗಾರರ ವಿಚಾರದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಹಾಕುತ್ತಿದೆ. ಮೀನುಗಾರರಿಗೆ ಡಿಸೆಲ್ ಸಬ್ಸಿಡಿ ನೀಡಿಲ್ಲ. ಪರಿಹಾರದ ಹಣವನ್ನು ಇಮ್ಮಡಿ ಮಾಡಿಲ್ಲ. ಬಡ್ಡಿರಹಿತ ಸಾಲಸೌಲಭ್ಯ ನೀಡಿಲ್ಲ. ಕಳೆದು ಹೋದ ಮೀನುಗಾರರ ಹುಡುಕಾಟಕ್ಕೆ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿಲ್ಲ. ಅಮಿತ್ ಶಾ ಉಡುಪಿಗೆ ಬಂದು ಸೀಮೆಎಣ್ಣೆ ನೀಡುತ್ತಿನೆ ಎಂದು ಬಿಟ್ಟಿ ಭರವಸೆ ಕೊಟ್ಟರೇ ವಿನಹ ಆ ಬಳಿಕ ಮೂರ್ನಾಲ್ಕು ಭಾರಿ ನಿಯೋಗ ಹೋದರೂ ಮೀನುಗಾರರಿಗೆ ಸೀಮೆ ಎಣ್ಣೆ ದೊರೆಯಲಿಲ್ಲ. ರಾಜ್ಯ ಸರಕಾರ ಈ ಎಲ್ಲದರ ಬಗ್ಗೆಯೂ ಪ್ರಾಮಾಣಿಕ ಪ್ರಯತ್ನ ಮಾಡಿ ಮೀನುಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂಬುದನ್ನು ಮರೆಯಬಾರದು ಎಂದರು. ಕರಾವಳಿಯ ಹೆಮ್ಮೆಯಂತಿದ್ದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿ ಕರಾವಳಿಗರಿಗೆ ಅನ್ಯಾಯ ಮಾಡಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಯಾರಾದರೂ ಮೃತರಾದರೂ ಅವರ ಹೆಸರಿನಲ್ಲಿ ರಾಜಕೀಯ ಬಿಜೆಪಿ ಮಾಡಲು ಮುಂದಿದ್ದಾರೆ. ಉತ್ತರಕನ್ನಡದಲ್ಲಿ ಪರೇಶ್ ಮೇಸ್ತದ ವಿಚಾರವನ್ನು ಇಟ್ಟುಕೊಂಡು ಕರಾವಳಿಯಲ್ಲಿ ಮತಯಾಚಿಸಿದ್ದ ಬಿಜೆಪಿಗೆ ಈಗ ಪರೇಶ್ ಮೇಸ್ತ ಬೇಡವಾಗಿದ್ದೇನೆ. ಅಲ್ಲಿಗೆ ಹೋಗಿ ರಾಜಕೀಯ ಮಾಡಿ ಬಂದಿದ್ದ ಶೋಭಾ ಕರಂದ್ಲಾಜೆ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿ ಒಂದೂವರೆ ವರ್ಷವಾದರೂ ಈವರೆಗೂ ತಾರ್ಕಿಕ ಅಂತ್ಯ ದೊರಕಿಸುವಲ್ಲ ಶ್ರಮಿಸಿಲ್ಲ ಎಂದು ಆರೋಪಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.