ಯಡ್ತರೆ ಪಾಣ್ತಿಗರಡಿ: ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಸಂಪನ್ನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಶುಕ್ರವಾರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಯಶಸ್ವಿಯಾಗಿ ನೆರವೇರಿದವು.

Call us

Click Here

ಅಂದು ಬೇರೀತಾಡನ ಸಹಿತ ವಾದ್ಯ ಘೋಷದೊಂದಿಗೆ ಪ್ರಾತಃ ಪೂಜೆ, ಶ್ರೀ ದೈವಗಳಿಗೆ ಕಲಾ ತತ್ವಹೋಮ, ಮಿಥುನ ಲಗ್ನದಲ್ಲಿ ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮಕಲಷಾಭಿಷೇಕ, ಪುಪ್ಪಾಲಂಕಾರ ಅಷ್ಟೋತ್ತರ ಅರ್ಚನೆ, ಮಹಾ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಪ್ರಸನ್ನ ಪೂಜೆ, ಪ್ರಾರ್ಥನೆ, ದಿಗ್ಬಿಲಿ, ಧ್ವಜ ಅವರೋಹಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೇ. ಮೂ. ಜ್ಯೋತಿಷಿ ರಮೇಶ್ ಭಟ್ ಭಟ್ಕಳ ಅವರ ಆದ್ವರ್ಯದಲ್ಲಿ ಜರುಗಿದವು.

ಈ ಸಂದರ್ಭ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನ ಜೀಣೋದ್ಧಾರ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮೊಕ್ತೇಸರರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದ ಬಳಿಕ ಮಹಾಅನ್ನಸಂತರ್ಪಣೆ ಜರುಗಿತು.

Leave a Reply