ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಾಂಡ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಆಯೋಜಿಸಿರುವ ರಜಾ ಮಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ವಿಶೇಷವಾಗಿ ಆಚರಿಸಲಾಯಿತು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮಾತನಾಡಿ ಮಗುವಿನ ಶಿಕ್ಷಣಕ್ಕೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ ಆ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪೋಷಕರಿಬ್ಬರ ಜವಾಬ್ದಾರಿ ದೊಡ್ಡದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಉದಯ ಗಾಂವ್ಕರ್ ಮಾತನಾಡಿ ಸರಕಾರಿ ಶಾಲೆ ಬಾಗಿಲು ಹಾಕಿತು ಎಂದರೆ ಹಲವಾರು ಸಂಬಂಧಗಳು ಕಡಿದು ಹೋಗುತ್ತದೆ. ಹಾಗಾಗಿ ಒಂದು ಊರಿನಲ್ಲಿ ಯಾವುದೇ ಸರ್ಕಾರಿ ಕಛೇರಿಗಳು ನಶಿಸಿ ಹೋಗಬಾರದು. ಪ್ರತಿ ಮಗುವು ಒಂದು ಊರಿಗೆ ರೇವಣಿ ಇದ್ದ ಹಾಗೆ ಪ್ರತಿ ಮಗುವಿನಲ್ಲಿ ಕೂಡ ವಿಭಿನ್ನವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಪ್ರಯತ್ನ ಶಿಕ್ಷಕರಿಂದ ಆಗಬೇಕು ಎಂದು ತಿಳಿಸಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕೆ. ಸುಬ್ಬಣ್ಣ ಶೆಟ್ಟೆ ಬಾಂಡ್ಯರವರು ವಹಿಸಿದ್ದರು. ಈ ಸಂದರ್ಭದಲ್ಲಿ ನಿವೇದಿತಾ ಪ್ರೌಢ ಶಾಲೆ ಬಸ್ರೂರು ಮುಖ್ಯೋಪಾಧ್ಯಾಯ ದಿನಕರ ಶೆಟ್ಟಿ ಗುರುಕುಲ ವಿದ್ಯಾಸಂಸ್ಥೆಯ ವಕ್ವಾಡಿ ಜಂಟಿ ಕಾರ‍್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕ ಜನಾರ್ಧನ ಪಟಗಾರ್ ಎಸ್.ಡಿ.ಎಮ್ ಸಿ ಅಧ್ಯಕ್ಷ ರತ್ನಾಕರ ಆಚಾರ್ಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಮಡಿವಾಳ ಉಪಸ್ಥಿತರಿದ್ದರು.
ಕಾರ‍್ಯಕ್ರಮದ ರುವಾರಿ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‌ನ ಜಂಟಿಕಾರ‍್ಯನಿರ್ವಾಹಕಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ರಾಘವೆಂದ್ರ ಅಮುಜೆ ನಿರೂಪಿಸಿದರು, ವಿಧ್ಯಾರ್ಥಿನಿ ಕು. ಅಮೃತಾ ಸ್ವಾಗತಿಸಿದರು. ವಿಧ್ಯಾರ್ಥಿ ನಿರಂಜನ ವಂದಿಸಿದರು.