ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕಿನ ಉಳ್ಳೂರು ಗ್ರಾಮದ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಶ್ರೀ ಗಣಪತಿ, ಶಾಸ್ತಾ, ನಾಗ ದೇವರ ನೂತನ ಪ್ರತಿಷ್ಠೆ ಹಾಗೂ ನೂತನ ಸುತ್ತು ಪೌಳಿ, ತೀರ್ಥಬಾವಿ, ರಾಜಗೋಪುರಗಳ ಅರ್ಪಣಾ ಮಹೋತ್ಸವವು ಎ.29ರಿಂದ ಮೇ.02ರ ವರೆಗೆ ನಡೆಯಲಿದೆ.
ಎ.29ರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ssಸ್ವಸ್ತಿಪುಣ್ಯಾಹ ವಾಚನ ಮತ್ತು ನಾಂದಿ, ಎ.30ರ ಬೆಳಿಗ್ಗೆ ಶ್ರೀ ಗಣಪತಿ ದೇವರಿಗೆ ಬ್ರಹ್ಮ ಬ್ರಹ್ಮಕಲಶ ಸ್ಥಾಪನೆ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಹಸ್ರ ಕುಂಭ ಸ್ಥಾಪನೆ,ರ ಬೆಳಿಗ್ಗೆ ಸ್ವಸ್ತಿಪುಣ್ಯಾಹ ವಾಚನ, ಮಧುಪರ್ಕ ಪೂಜೆ, ಕೌತುಕ ಬಂಧನ, ಋತ್ವಿಗ್ವರಣೆ, ಗಣಹೋಮ, ನವಗ್ರಹ ಹೋಮ, ಬಿಂಬಶುದ್ಧಿ, ಕಳಶ ಸ್ಥಾಪನೆ, ಬಿಂಬಶುದ್ಧಿ ಹೋಮ, ಬಿಂಬ ಜಲಾಧಿವಾಸ, ಬಿಂಬಶುದ್ಧಿ ಕಲಶಾಭಿಷೇಕ, ನೇತ್ರೋನ್ಮೀಲನ, ಶಯ್ಯಾಕಲ್ಪನ, ಅನ್ನ ಸಂತರ್ಪಣೆ ನಡೆಯುವುದು. ಸಂಜೆ ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ, ವಾಸ್ತು ಹೋಮ, ಮಂಟಪ ಸಂಸ್ಕಾರ, ಅಧಿವಾಸ ಪೂಜಾ, ಅಗ್ನಿ ಜನನ, ರತ್ನನ್ಯಾಸ ಹೋಮ, ಅಷ್ಟಬಂಧ ಅಧಿವಾಸ ಹೋಮ, ಪ್ರತಿಷ್ಠಾ ಹೋಮ ನಡೆಯುವುದು.
ಮೇ.01ರ ಬೆಳಿಗ್ಗೆ ಸ್ವಸ್ತಿಪುಣ್ಯಾಹ ವಾಚನ, ದುರ್ಗಾಹೋಮ, ರತ್ನನ್ಯಾಸ ಪುರಸ್ಸರ ಸಪರಿವಾರ ಶ್ರೀ ದುರ್ಗಾಪರಮೇಶ್ವರಿ ಅಷ್ಟಬಂಧ ಪ್ರತಿಷ್ಠೆ, ನ್ಯಾಸಾದಿಗಳು, ಕಲಾತತ್ವಹೋಮ, ಶಾಂತಿಹೋಮ, ಮಹಾಪೂe, ಅನ್ನ ಸಂತರ್ಪಣೆ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಸಹಸ್ರಕುಂಭ ಸ್ಥಾಪನೆ, ಶ್ರೀ ಗಣಪತಿ ದೇವರಿಗೆ ಬ್ರಹ್ಮಕಲಶ ಸ್ಥಾಪನೆ, ಪ್ರಧಾನ ಹೋಮ, ಅಧಿವಾಸ ಹೋಮ ನಡೆಯುವುದು. ಸಂಜೆ 5:30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ಮಾಡುವರು. ಬಿ. ಅಪ್ಪಣ್ಣ ಹೆಗ್ಡೆ, ಎಸ್. ಸಚ್ಚಿದಾನಂದ ಚಾತ್ರ, ಸಿ. ಸದಾಶಿವ ಶೆಟ್ಟಿ ಉಪಸ್ಥಿತರಿರುವರು.
ಮೆ.2ರ ಬೆಳಿಗ್ಗೆ ಸಹಸ್ರ ಕುಂಭಾಭಿಷೇಕ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯುವುದು. ಸಂಜೆ 5:30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಪ್ಪ ಪೀಠಿಕಾಪುರ ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಆಶೀರ್ವಚನ ಮಾಡುವರು. ಬಿ. ಅಪ್ಪಣ್ಣ ಹೆಗ್ಡೆ, ಹರೀಶಕುಮಾರ ಶೆಟ್ಟಿ, ಎಸ್. ಜನಾರ್ದನ ಉಪಸ್ಥಿತರಿರುವರು. ರಾತ್ರಿ ರಂಗಪೂಜೆ ನಡೆಯುವುದು. ಎ.29ರಿಂದ ಮೇ.02ರ ವರೆಗೆ ಪ್ರತಿಸಂಜೆ ಖ್ಯಾತ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.