ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಇಲ್ಲಿನ ರೋಟರಿ ಲಕ್ಷ್ಮಿನರಸಿಂಹ ಕಲಾ ಮಂದಿರದಲ್ಲಿ ಮೇ. ೧೮ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ವಿಲೇಜ್ ಲೈಫ್ ಚಿತ್ರಕಲಾ ಪ್ರದರ್ಶನ ಉದ್ಘಾಟನೆಗೊಳ್ಳಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಚಿತ್ರಕಲಾ ಪ್ರದರ್ಶನವನ್ನು ಕೋಟ ಗೀತಾನಂದ ಫೌಂಡೇಶನ್ನಿನ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಲಿದ್ದಾರೆ. ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷ ಗೋಪಾಲ್ ಶೆಟ್ಟಿ ಶೇಡಿಮನೆ ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಜಿಲ್ಲಾ ಗವರ್ನರ್ ರೋ. ಅಭಿನಂದನ್ ಶೆಟ್ಟಿ, ಚಿನ್ಮಯಿ ಆಸ್ಪತ್ರೆಯ ವೈದಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್, ಕುಂದಾಪುರ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ. ರತ್ನಾಕರ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಮಾಹಿತಿ ನೀಡಿ ಕಲೆಯನ್ನು ಪ್ರದರ್ಶಿಸುವ ವಿಧಾನ ಮತ್ತು ಹೃದಯಿಯನ್ನು ಅರಿತುಕೊಳ್ಳುವ ರೀತಿ ಸಮನಾಗಿದ್ದರೆ ಇನ್ನಷ್ಟು ಬಲಿಷ್ಟವಾಗುತ್ತದೆ ಎನ್ನುವ ಉದ್ದೇಶದಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗುತ್ತಿದೆ. ರೋಟರಿ ಕುಂದಾಪುರ ಸಾರಥ್ಯದೊಂದಿಗೆ ಕುಂದಾಪುರ ಮತ್ತು ಮಣಿಪಾಲ ತ್ರಿವರ್ಣ ಕಲಾ ಕೇಂದ್ರವು ಪ್ರದರ್ಶನ ಆಯೋಜಿಸಿದೆ ಎಂದರು.
ಮುಂದುವರಿದು ಮಾತನಾಡಿದ ಅವರುಕಲಾವಿದನಾಗಿ, ಮಾರ್ಗದರ್ಶಕನಾಗಿ ಕಳೆದ ೧೨ ವರ್ಷಗಳಿಂದ ತರಭೇತಿಯನ್ನು ನೀಡುವುದರ ಜೊತೆಗೆ ಪ್ರತಿಭೆಗೊಂದು ಸೂಕ್ತ ವೇದಿಕೆಯನ್ನು ಕಲ್ಪಿಸುವುದು ನನ್ನಲ್ಲಿರುವ ಸವಾಲು. ಕಲಿಕೆ ಹೇಗೆ ನಿರಂತರವಾಗಿರುತ್ತದೋ…ಹಾಗೆ ಪ್ರತಿಭೆಗಳ ಅನಾವರಣ ರೂಪುಗೊಳ್ಳುತ್ತಾ ಬರುತ್ತದೆ ಎಂಬುವುದು ನನ್ನ ನಂಬಿಕೆ. ಇದಕ್ಕೆ ಪೂರಕವೆಂಬಂತೆ ನ್ನಲ್ಲಿ ವಿದ್ಯಾರ್ಜನೆಗೈಯುವ ೧೯ ವರ್ಷದಿಂದ ೭೫ ವರ್ಷದವರೆಗಿನ ಹಿರಿಯರ ವಿಭಾಗದವರಿಗೆ ಆಯೋಜಿಸಲಾದ ಕಲಾ ವೇದಿಕೆ ಹಳ್ಳಿ ಜೀವನದ ಮತ್ತು ತಮ್ಮ ಜೀವನದಲ್ಲಿ ಕಂಡುಕೊಂಡ ಮರೆಯಲಾಗದ ದೃಶ್ಯವನ್ನು ತಮ್ಮ ತಮ್ಮ ಕಲ್ಪನೆಗೆ ಪೂರಕವಾಗಿ ಚಿತ್ರರಚಿಸಲು ಅವಕಾಶವನ್ನು ಆಯ್ದ ನನ್ನ ವಿದ್ಯಾರ್ಥಿಯರಿಗೆ ಕೊಟ್ಟಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಮಾ ಪುತ್ರನ್ ಇದ್ದರು.
ಪ್ರದರ್ಶನಗೊಳ್ಳಲಿರುವ ಕಲಾಕೃತಿಗಳು :
ಜನಸಾಮಾನ್ಯರಿಂದ ಹಿಡಿದು ಇಂದಿನ ಜೀವನ ಶೈಲಿಗೆ ಸವಾಲಾಗಿ ನಿಂತ ಶುದ್ಧ ವಾತಾವರಣವುಳ್ಳ ಬಾಲ್ಯದ ನೋಟ, ಅದ್ಭುsತ ಆಟ, ಕಠಿಣ ಪರಿಶ್ರಮ, ಆರೋಗ್ಯಕರ ತಿನಸು ಎಲ್ಲವೂ ಮರೆಮಾಚುವ ಸಂಧರ್ಭಕ್ಕೊಂದು ಹೊಸ ಅನುಭವಗಳ ಮತ್ತು ಅವಿಸ್ಮರಣೀಯ ಕ್ಷಣಗಳ ಮೆಲುಕು ಹಾಕುವ ಪ್ರಯತ್ನವೇ ಈ ’ವಿಲ್ಲೇಜ್ ಲೈಫ್’
ಅಕ್ಕಿ ಮುಡಿ ಕಟ್ಟುವುದು, ಎಳನೀರು ಸೇವನೆಯಲ್ಲಿ ವೃದ್ಧ, ಗುಟ್ನ ಆಡುವ ಹುಡುಗಿಯರು, ಹೂ ಕಟ್ಟುತ್ತಿರುವ ಮಹಿಳೆ, ದನ-ಕರುಗಳೊಂದಿಗೆ ಸಾಗುವ ಮಹಿಳೆ, ಓಲೆಯಲ್ಲಿ ಬೆಂಕಿ ಮಾಡುತ್ತಿರುವ ತಾಯಿ, ಮೊಸರು ಕಡಿಯುತ್ತಿರುವ ಗೃಹಣಿ, ಲಗೋರಿಯಲ್ಲಿ ಗುರಿ ಹೊಡೆಯುತ್ತಿರುವ ಹುಡುಗ, ಮೀನು ಹಿಡಿಯುತ್ತಿರುವ ತುಂಟ ಮಕ್ಕಳು, ಐಸ್ ಕ್ಯಾಂಡಿ ಮಾರುವವ, ತಾಂಬೂಲ ಸೇವನೆಯಲಿ ಮನೆಯೊಡತಿ, ಮುಂಜಾನೆ ಎತ್ತಿನಗಾಡಿಯ ಪ್ರಯಾಣ, ಮಗುವಿನ ಎಣ್ಣೆ ಸ್ನಾನ, ಬುಗುರಿ ತಿರುಗಿಸುತ್ತಿರುವ ಬಾಲಕ, ತೋರಣ ಕಟ್ಟುವುದು, ಚಿಮಣಿ ದೀಪದಲ್ಲಿ ಓದುವ ಬಾಲಕಿ, ಮಡಲು ನೇಯುತ್ತಿರುವುದು, ಬಾಲ್ಯದ ಉಯ್ಯಾಲೆ, ಚಿಟ್ಟೆಯನ್ನು ಹಿಡಿಯುವ ಕ್ಷಣ, ಹಲಸಿನ ಹಣ್ಣಿನ ಸೇವನೆ, ಭೂತದ ಕೋಲ, ಚೆನ್ನಮಣೆಯ ಆಟ, ಟಯರಿನೊಂದಿಗಿನ ಓಟ, ದೇವರ ಮುಂದೆ ಭಕ್ತಿಯ ದೀಪ, ಕದಿರು ಕಟ್ಟುವ ಸಂಭ್ರಮಗಳ ಒಟ್ಟು ೨೫ ಕಲಾಕೃತಿಗಳಲ್ಲಿ ಅಕ್ರಾಲಿಕ್ ಕ್ಯಾನ್ವಾಸ್‌ನ ೧೮ ಕಲಾಕೃತಿ ಮತ್ತು 7 ಚಾರ್ಕೋಲ್ ಪೇಪರ್ ಮಾಧ್ಯಮzಲ್ಲಿ ರಚಿಸಲ್ಪಟ್ಟ 30×30 ಇಂಚಿನ ಕಲಾಕೃತಿಗಳು ಹಳ್ಳಿ ಸೊಗಡು, ದ್ಧಾ-ಭಕ್ತಿ, ವೃತ್ತಿ-ದಿನಚರಿ, ಬಾಲ್ಯದ ಮೋಜಿನ ಆಟ, ಕಠಿನ ಪರಿಶ್ರಮ, ಹಳ್ಳಿ ತಿನಸುಗಳ ಮರೆಯಲಾಗದ ಅವಿಸ್ಮರಣೀಯ ಕ್ಷಣ.
ಕಲಾ ಪ್ರದರ್ಶನದಲ್ಲಿ ಭಾಗವಹಿಸುರು :
ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರದ ಹಿರಿಯವಿದ್ಯಾರ್ಥಿಯರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುವ ಈ ಕಲಾಪ್ರದರ್ಶನಕ್ಕೆ ಡಿ.ವಿ. ಶೆಟ್ಟಿಗಾರ್-ಮಣಿಪಾಲ, ಡಾ. ಜಿ. ಎಸ್. ಕೆ. ಭಟ್- ಪೆರ್ಡೂರು, ಆಶಾ ತೋಳಾರ್- ಕುಂದಾಪುರ, ಜಯಾ ಎಸ್. ಕುಡ್ವ-ಮಣಿಪಾಲ, ನಿರ್ಮಲ ಸಿ. ಶೆಟ್ಟಿ-ಮುಂಬೈ, ಸುಮ ಪುತ್ರನ್-ಕೋಟೇಶ್ವರ, ಡಾ. ಜಿ. ಶಿವಪ್ರಕಾಶ್-ಮಣಿಪಾಲ, ಸುಷ್ಮಾ ಎಸ್. ಕೋಟೇಶ್ವರ, ಗುರುಪ್ರಸಾದ್ ಯು. ಆತ್ರಾಡಿ, ಜೈ ನೇರಳಕಟ್ಟೆ-ಕುಂದಾಪುರ, ಜಿ. ಯಶಾ-ಪೆರ್ಡೂರು, ಪ್ರಸಾದ್ ಆರ್. -ಮಣಿಪಾಲ, ಅನುಷಾ ಆಚಾರ್ಯ-ಪರ್ಕಳ, ಪವಿತ್ರ ಸಿ. ಆಚಾರ್ಯ-ಶಿವಮೊಗ್ಗ, ಅಭಿನಯ ಎನ್. ಹಿರಿಯಡ್ಕ, ಕೆರೋಲಿನ್-ಉಡುಪಿ, ನಯನಾ ಬಿ. ಮಾಬುಕಳ, ಬಿ.ಸಚಿನ್ ರಾವ್, ರೋಶ್ನಿ ಕುಂದಾಪುರ, ಶಹನಾಜ್ಹ್ ಹೆಚ್. ಯೆಲ್ಲನೂರ್- ಉಡುಪಿ, ಸುನಿಧಿ ಶೆಟ್ಟಿ-ಚಿಕ್ಕಮಗಳೂರು, ಮಹಾಲಕ್ಷ್ಮಿ ಹೆಬ್ಬಾರ್-ಕೋಟೇಶ್ವರ, ಮಾಧವಿ ಮುನ್ನಲುರಿ- ಮುಂಬೈ, ಪಲ್ಲವಿ ಜೆ. ಅಡಿಗ-ಹಾಲಾಡಿ ಮತ್ತು ಹೃತಿಕ್ ಜೆ. ಶೆಟ್ಟಿ ಕೆ. ಕುಂದಾಪುರ- ಒಟ್ಟು 25 ವಿದ್ಯಾರ್ಥಿಯರು ತನ್ನ ಕಲ್ಪನೆ ಮತ್ತು ಅನುಭವಗಳನ್ನು ಸಂಯೋಜಿಸಿ ಹೊಸ ಆಯಾಮವನ್ನು ನೀಡುವಲ್ಲಿ ಪ್ರಯತ್ನಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ /