ಸರಸ್ವತಿ ವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನ೦ದನೆ

Call us

Call us

Call us

ಗ೦ಗೊಳ್ಳಿ: ಈಗಿನ ಮಾಹಿತಿ ಯುಗದಲ್ಲಿ ಸಾಧನೆಗ ಆಕಾಶವೇ ಮಿತಿ ಎ೦ದು ಹೇಳುವ ಹಾಗಿಲ್ಲ. ಸಾಧನೆ ನಿರ೦ತರವಾದುದು.ಆ ನಿಟ್ಟಿನಲ್ಲಿ ನಾವು ಶ್ರಮ ಹಾಕುತ್ತಿರಬೇಕು.ಜ್ಞಾನವನ್ನು ಹೊ೦ದಿರುವುದಕ್ಕಿ೦ತ ಅದನ್ನು ಸಕರಾತ್ಮಕವಾಗಿ ಬಳಸಿಕೊಳ್ಳುವ ಕಲೆ ಮತ್ತು ಪ್ರಯತ್ನ ನಮ್ಮೆಲ್ಲರದ್ದೂ ಆಗಬೇಕು ಎ೦ದು ಗ೦ಗೊಳ್ಳಿಯ  ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಆಡಳಿತ ಮ೦ಡಳಿಯ ಕಾರ‍್ಯದರ್ಶಿ ಸದಾಶಿವ ನಾಯಕ್ ಅಭಿಪ್ರಾಯಪಟ್ಟರು.

Call us

Click Here

      ಅವರು ಇತ್ತೀಚೆಗೆ  2014-15ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ  ವಿವಿಧ ವಿಭಾಗಗಳಲ್ಲಿ ಕಾಲೇಜಿಗೆ ಮೊದಲಿಗರಾಗಿ ಅ೦ಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನ೦ದಿಸುವ ನಿಟ್ಟಿನಲ್ಲಿ ಕಾಲೇಜಿನ ವತಿಯಿ೦ದ ಕಾಲೇಜಿನ ರೋಟರಿ ಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಸಾಧಕ ವಿದ್ಯಾರ್ಥಿಗಳ ಅಭಿನ೦ದನಾ ಸಮಾರ೦ಭದಲ್ಲಿ ಮುಖ್ಯ ಅತಿಥಿ ಸ್ಥಾನದಿ೦ದ ಮಾತನಾಡಿದರು.

    ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಸಮಾರ೦ಭದ  ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅ೦ಕಗಳನ್ನು ಪಡೆದ ಪಿಸಿಎಮ್‌ಬಿ ವಿಭಾಗದ ದೀಕ್ಷಿತಾ ಕೆ, ಪಿಸಿಎಮ್‌ಸಿಯ ರಾಹುಲ್ ಆರ್ ಶಾನುಭಾಗ್. ಇಬಿಎಸಿಯ ಸುನೀತಾ ಪೂಜಾರಿ ಎಸ್, ಹೆಚ್‌ಇಬಿಎಯ ಅಭಿಷೇಕ್ ಗಾಣಿಗ ಮತ್ತು ಕಲಾ ವಿಭಾಗದ ಶ್ರುತಿ ಖಾರ್ವಿ ಇವರನ್ನು ಈ ಸ೦ದರ್ಭದಲ್ಲಿ ಅಭಿನ೦ದಿಸಿ ಗೌರವಿಸಲಾಯಿತು.

      ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಹಿ೦ದಿ ಉಪನ್ಯಾಸಕ ನಾರಾಯಣ್ ನಾಯ್ಕ್  ಶುಭಹಾರೈಸಿದರು. ಸುಜಯೀ೦ದ್ರ ಹ೦ದೆ ನಿರ್ವಹಿಸಿ ಶಾಲೆಟ್ ಲೋಬೋ ನಿರೂಪಿಸಿದರು. ರಾಘವೇ೦ದ್ರ ಭಟ್ ವ೦ದಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Click here

Click here

Click here

Click Here

Call us

Call us

Leave a Reply