ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳತನ ಹಾಗೂ ಗೋ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಗೋವುಗಳ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದ್ದು ಹಿಂದುಗಳ ಧಾರ್ಮಿಕ ಭಾವನೆಯನ್ನು ವಿಡಂಬನೆ ಮಾಡಿ ಮತಿಯ ದ್ವೇಷಕ್ಕೆ ಎಡೆಮಾಡಿಕೊಡುತ್ತಿದೆ. ಯಾವುದೇ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಗೋವುಗಳ ಕಳ್ಳತನ ಮಾಡುತ್ತಿರುವುದು ಛೇದಕರ. ತಾಲೂಕಿನಲ್ಲಿ ಗೋವುಗಳ ಪಾಲನೆಗಾಗಿ ಕಾದಿರಿಸಿರುವ ಗೋಮಾಳದ ಜಾಗವನ್ನು ಗುರುತಿಸಿ ಗೋವುಗಳ ಪಾಲನೆಗೆ ಅವಕಾಶ ಮಾಡಿಕೊಡುವುದು, ಏಳಜಿತದಲ್ಲಿ ಮನೆಯಿಂದ ಗೋವುಗಳನ್ನು ಕಳ್ಳತನ ಮಾಡಲಾಗಿದ್ದು, ಆ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡಬೇಕು ಹಾಗೂ ಗೋವು ಕಳ್ಳರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೈಂದೂರು ರೋಟರಿ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಿದ ಬಳಿಕ ಮೆರವಣಿಗೆಯಲ್ಲಿ ತಹಶಿಲ್ದಾರರ ಕಛೇರಿಗೆ ಸಾಗಿಬಂದು ಬೈಂದೂರು ತಹಶೀಲ್ದಾರರು ಹಾಗೂ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ್ ಶಿಣವ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದರ್ತಿ, ಸಹಕಾರ್ಯದರ್ಶಿ ಗಿರೀಶ್ ಕುಂದಾಪುರ, ಗೋರಕ್ಷಾ ಪ್ರಮುಖ್ ದಿನೇಶ್ ಶೆಟ್ಟಿ ಹೆಬ್ರಿ, ವಿಹಿಂಪ ಬೈಂದೂರು ಪ್ರಖಂಡ ಪ್ರಮುಖ್ ಶ್ರೀಧರ ಬಿಜೂರು, ಸಂಚಾಲಕ ಜಗದೀಶ್ ಕೊಲ್ಲೂರು, ವಿಹಿಂಪ ಉಪ್ಪುಂದ ಭಾಗದ ಪ್ರಮುಖ ಸುಧಾಕರ ಶೆಟ್ಟಿ, ಸಂತ್ರಸ್ಥೆ ರಿಷಿಕಾ, ಜಿ.ಪಂ ಸದಸ್ಯರುಗಳಾದ ಸುರೇಶ್ ಬಟವಾಡಿ, ಬಾಬು ಶೆಟ್ಟಿ, ತಾ.ಪಂ ಸದಸ್ಯರುಗಳಾದ ಪುಪ್ಪರಾಜ ಶೆಟ್ಟಿ, ಮಹೇಂದ್ರ ಪೂಜಾರಿ, ಕರಣ ಪೂಜಾರಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಮಹಿಳಾ ಮೋರ್ಚಾ ಅಧ್ಯಕ್ಷ ಪ್ರೀಯಾ ಕಮಲೇಶ್, ಬೈಂದೂರು ಭಾಗದ ಮುಖಂಡರು ಹಾಗೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೀಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.