ಆಳ್ವಾಸ್ ಪ್ರಗತಿ 2019 ಉದ್ಯೋಗ ಮೇಳ ಸಂಪನ್ನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 11ನೇ ವರ್ಷದ ಆಳ್ವಾಸ್ ಪ್ರಗತಿ 2019 ಶನಿವಾರ ಸಂಪನ್ನಗೊಂಡಿದ್ದು, ಉದ್ಯೋಗ ಮೇಳದಲ್ಲಿ ಒಟ್ಟು 1712 ಉದ್ಯೋಗಾಕಾಂಕ್ಷಿಗಳು ಸ್ಪಾಟ್ ಆಫರ್ಸ್ ಪಡೆದರೆ, ಒಟ್ಟು 3697 ಅಭ್ಯರ್ಥಿಗಳು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಗೊಂಡಿದ್ದಾರೆ.

Call us

Click Here

ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ ಆಗಮಿಸಿದ್ದ 208 ಕಂಪೆನಿಗಳಲ್ಲಿ 163 ಕಂಪೆನಿಗಳು ತಮ್ಮ ಸ್ಪಾಟ್ ಆಫರ್ಸ್ ಹಾಗೂ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಡುಗಡೆಗೊಳಿಸಿತ್ತು. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ 8,453 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು.

ಕೋಡಿಕಲ್‍ನ ಪ್ರಜ್ಚಾಲ್ ಡಿ’ಕುನ್ಹಾ, ದೇರೆಬೈಲ್‍ನ್ ರಾಘವೇಂದ್ರ ಭಟ್ ಹಾಗೂ ಡೈನಿಟಾ ಪಿಂಟೋ ಅಂತರಾಷ್ಟ್ರೀಯ ಕಂಪೆನಿಯಾದ ರಿಫಿನಿಟಿವ್ ಕಂಪೆನಿಯಲ್ಲಿ ವಾರ್ಷಿಕ ರೂ 5.5 ಲಕ್ಷದ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಈ ಸಂಧರ್ಭದಲ್ಲಿ ತನ್ನ ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡಿದ ಡೈನಿಟಾ ಪಿಂಟೋ, ಪ್ರಗತಿಯ ಮೊದಲ ದಿನ ತನ್ನ ಗೆಳತಿ ಇದೇ ಕಂಪೆನಿಯಲ್ಲಿ ಆಯ್ಕೆಯಾದ್ದರಿಂದ, ಅವಳ ಮಾಹಿತಿಯ ಮೇರೆಗೆ, ಪ್ರಗತಿಯ ಎರಡನೆಯ ದಿನ ಪಾಲ್ಗೊಂಡು ತಾನು ಆದೇ ಕಂಪೆನಿಗೆ ಆಯ್ಕೆ ಆಗುವಂತೆ ಆಯಿತು. ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಇಡೀ ದೇಶದಲ್ಲೇ ಪ್ರಖ್ಯಾತಿಯನ್ನು ಪಡೆದಿದ್ದು, ಇಲ್ಲಿನ ಆಯೋಜನೆ, ಅಭ್ಯರ್ಥಿಗಳಿಗೆ ಒದಗಿಸಿದ ಸೌಲಭ್ಯ, ಮಾಹಿತಿ ಕೇಂದ್ರಗಳು, ಪ್ರತಿ ವಿಭಾಗಗಳಲ್ಲೂ ನೆರೆವಾಗುವ ಸ್ವಯಂ ಸೇವಕರುಗಳು ನಿಜಕ್ಕೂ ಶ್ಲಾಘನೆಗೆ ಅರ್ಹರು ಎಂದಿದ್ದಾರೆ.

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಕಾಲೇಜಿನ ತೃಪ್ತಿ ಎ.ಎಚ್ ಅಂತರಾಷ್ಟ್ರೀಯ ಕಂಪೆನಿಯಾದ ರಿಫಿನಿಟಿವ್ ಕಂಪೆನಿಯಲ್ಲಿ ವಾರ್ಷಿಕ ರೂ 5.5 ಲಕ್ಷದ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಈ ಕಂಪೆನಿಗೆ ಎರಡು ದಿನದ ಉದ್ಯೋಗ ಮೇಳದಲ್ಲಿ ಒಟ್ಟು 9 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಆಳ್ವಾಸ್ ಕಾಲೇಜಿನಲ್ಲಿ ದತ್ತು ಸ್ವೀಕಾರದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ, ನಂತರ ಮಣಿಪಾಲ ವಿಶ್ವ ವಿದ್ಯಾಲಯದಲ್ಲಿ ಎಂ.ಕಾಂ ಮುಗಿಸಿದ ಸುಶ್ಮಿತಾ ಸುಬ್ರಮಣ್ಯ, ಆಳ್ವಾಸ್ ಪ್ರಗತಿಯಲ್ಲಿ ಪ್ರತಿಷ್ಠಿತ ಇವೈ ಕಂಪೆನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯಾಗಿದ್ದ ಆಳ್ವಾಸ್ ಪ್ರಗತಿಯಲ್ಲಿ ಸ್ವಯಂ ಸೇವಕರಾಗಿ ದುಡಿದ ಅನುಭವದಿಂದ ಈ ಪ್ರಗತಿಯಲ್ಲಿ ಉದ್ಯೋಗಗಿಟ್ಟಿಸಿಕೊಳ್ಳಲು ಸುಲಭವಾಯಿತು. ತಾನು ಪದವಿ ಶಿಕ್ಷಣವನ್ನು ಪಡೆಯುವಾಗಲೇ ಆಳ್ವಾಸ್ ಪ್ರಗತಿಯಲ್ಲಿ ಕೆಲಸವನ್ನು ಪಡೆಯುತ್ತನೆ ಎಂಬ ಭರವಸೆ ಇತ್ತು, ಇಂದು ನನ್ನ ಭರವಸೆ ನಿಜವಾಗಿದೆ. ನಾನು ಸಂಸ್ಥೆಯ ಅದ್ಯಕ್ಷರಿಗೆ ಸದಾ ಚಿರಋಣಿಯಾಗಿದ್ದೆನೆ.

Click here

Click here

Click here

Click Here

Call us

Call us

ಸೌದಿಅರೇಬಿಯಾ ಮೂಲದ ಎಕ್ಸರ್ಪಟೈಸ್ ಕಂಪೆನಿ ಈ ಉದ್ಯೋಗ ಮೇಳದಲ್ಲಿ 15 ಜನರನ್ನು ವಾರ್ಷಿಕ ರೂ 7 ಲಕ್ಷ ಮಾಸಿಕ ಸಂಬಳದೊಂದಿಗೆ ಆಯ್ಕೆ ಮಾಡಿದೆ. ಈ ಕಂಪೆನಿ ಮುಂದಿನ ಹಂತಕ್ಕೆ ಆಯ್ಕೆ ಮಾಡಿರುವ ಇನ್ನೂ 15 ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಎಂದು ಕಂಪೆನಿ ತಿಳಿಸಿದೆ. ಈ ಕಂಪೆನಿಯ ಆಪೇರೇಷನಲ್ ಮ್ಯಾನೇಜರ್ ಶೇಖ್ ಮೊಯ್ದಿನ್ ಕೆ. ಎಂ. ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ, ಆಳ್ವಾಸ್ ಪ್ರಗತಿಯಂತಹ ಅದ್ಬುತ ಉದ್ಯೋಗ ಮೇಳವನ್ನು ಆಯೋಜಿಸಿ, ಕಂಪೆನಿಗಳ ಸದಸ್ಯರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುನ್ನತ ರೀತಿಯ ಅತಿಥಿ ಸತ್ಕಾರವನ್ನು ನೀಡಿ, ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ನೀಡಿದ ಕೆಲಸ ನಿಜಕ್ಕೂ ಸ್ತುತ್ಯರ್ಹ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಸಿಗುವುದು ನಿಜಕ್ಕೂ ವಿಶೇಷ.

* ಎರಡು ದಿನದ ಉದ್ಯೋಗ ಮೇಳದ ಸ್ಪಾಟ್ ಆಫರ್ಸ್- 1712
* ಎರಡು ದಿನದ ಉದ್ಯೋಗ ಮೇಳದಲ್ಲಿ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಗೊಂಡವರು- 3697
* ಎರಡು ದಿನದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಒಟ್ಟು ಕಂಪೆನಿಗಳು- 208
* ಎರಡು ದಿನದ ಉದ್ಯೋಗ ಮೇಳದಲ್ಲಿ ಆಗಮಿಸಿದ ಉದ್ಯೋಗಾಕಾಂಕ್ಷಿಗಳು- 8453
* ಎರಡು ದಿನದ ಉದ್ಯೋಗ ಮೇಳದಲ್ಲಿ ಸ್ಪಾಟ್ ಆಫರ್ಸ್ ಹಾಗೂ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದ ಕಂಪೆನಿಗಳು- 163

Leave a Reply