ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದುಡಿಮೆಯ ಒಂದು ಭಾಗವನ್ನಾದರೂ ಸಮಾಜಕ್ಕೆ ಮೀಸಲಿರಿಸಬೇಕು ಎನ್ನುವ ಮನೋಭಾವ ಹೆಚ್ಚಬೇಕು. ಹಾಗಿದ್ದಾಗಲೇ ಸಮಾಜ ಉದ್ದಾರವಾಗುತ್ತದೆ, ದಾನ ಮಾಡಿವುದರಿಂದ ಮನಸ್ಸಿಗೂ ಸಂತೋಷವುಂಟಾವುತ್ತದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು.
ಅವರು ಭಾನುವಾರ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಇ. ಬೈಂದೂರು ಇದರ ೭ನೇ ವರ್ಷದ ಟ್ರಸ್ಟ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಟ್ರಸ್ಟ್ ಮೂಲಕ ಮನೆ, ವಿದ್ಯುತ್, ವಿದ್ಯಾಭ್ಯಾಸಕ್ಕೆ ಸಹಕಾರ ಮುಂತಾದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ರಾಮಕ್ಷತ್ರಿಯ ಸಮುದಾಯದ ಜನರ ಹೇಳಿಗೆಗೆ ನೆರವಾಗುತ್ತಿರುವುದು ಸಂತೋಷದ ಸಂಗತಿ ಎಂದು ಶ್ಲಾಘೀಸಿದರು.
ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದಿನೇಶ್ ಪ್ರಿಂಟರ‍್ಸ್‌ನ ದಿನೇಶ್ ಕುಂದಾಪುರ, ಮಲ್ಲಿಕ್ ಇಂಜಿನಿಯರಿಂಗ್ ಇಂಡಿಯಾ ಪ್ರೈ. ಲಿನ ಕೆ. ಲಕ್ಷ್ಮೀನಾರಾಯಣ, ಕದಂಬ ಗ್ರೂಫ್ ಆಫ್ ಹೋಟೆಲ್ಸ್‌ನ ದಿನೇಶ್ ನೆರಂಬಳ್ಳಿ, ಶ್ರೀ ರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ. ಚಂದ್ರಶೇಖರ್, ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರವೀಂದ್ರ ಕಾವೇರಿ, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಪರಮೇಶ್ವರ ಹೋಬಳಿದಾರ್ ಅತಿಥಿಗಳಾಗಿದ್ದರು.
ಟ್ರಸ್ಟಿಗಳಾದ ಕೆ.ಜಿ ನಾಗಪ್ಪ ಶೇರುಗಾರ್, ಶಶಿಧರ ನಾಯಕ್ ಚನ್ನಗಿರಿ, ಎ. ಶ್ರೀನಿವಾಸ ಮಾಸ್ಟರ್, ಬಿ. ಶ್ರೀಧರ, ವೆಂಕಟೇಶ ಕೆ.ಟಿ, ಜಯಾನಂದ ಹೋಬಳಿದಾರ್, ಜಯಂತಿ ನಾರಾಯಣ ರಾವ್, ಎನ್. ವಿಶ್ವೇಶ್ವರ ಮಯ್ಯಾಡಿ, ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀಧರ ಪಿ. ಪಡುವರಿ ಮೊದಲಾದವರು ಇದ್ದರು.
ಟ್ರಸ್ಟಿ ಅಶೋಕ ಕುಮಾರ್ ಬಾಡ ಪ್ರಸ್ತಾವನೆಗೈದರು. ಸಂಚಾಲಕ ಆನಂದ ಮದ್ದೋಡಿ ವರದಿ ವಾಚಿಸಿದರು. ಟ್ರಸ್ಟಿ ಬಿ. ವೆಂಕಟರಮಣ ಬಿಜೂರು ಸ್ವಾಗತಿಸಿ ಸಂಚಾಲಕ ಕೇಶವ ನಾಯಕ್ ವಂದಿಸಿದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ರೂಪ ಅಜಿತ್ ಕುಮಾರ್, ಹನಮಂತ ಜಿ., ವೆಂಕಟರಮಣ, ಮಹಾಬಲೇಶ್ವರ ಸಾಧಕರ ಪರಿಚಯ ಮಾಡಿದರು.