ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಜು.24: ಜಿಲ್ಲಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಘೋಷಿಸಿದ್ದ ರಜೆ ಜುಲೈ 24ರ ಬುಧವಾರವೂ ಮುಂದುವರಿಯಲಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಅವರು ಜು.23ರಂದು ರಜೆ ಘೋಷಿಸಿದ್ದರು.
ಮುಂದಿನ 24 ಗಂಟೆಗಳಲ್ಲಿ ಸುಮಾರು 205ಮಿ.ಮಿ ಮಳೆಯಾಗುವ ಹಾಗೂ ಭಾರಿ ಗಾಳಿ ಬೀಸುವ ಸಂಭವ ಇರುವ ಬಗ್ಗೆ ಮನ್ಸೂಚನೆಯನ್ನು ಹವಮಾನ ಇಲಾಖೆ ನೀಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರು ರಜೆ ನಿಧರ್ಾರವನ್ನು ಮುಂದುವರಿಸಿದ್ದಾರೆ.
ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ/ಖಾಸಗಿ ಪ್ರಾಥಮಿಕ ಶಾಲೆ, ಪೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಇರಲಿದೆ.