ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೃತ್ಯವನ್ನು ಹೇಗೆ ಮಾಡುವುದು ಎಂಬುದನ್ನು ಎಂಬುದನ್ನು ಕಲಿಯುತ್ತಾರೆ. ಆದರೆ ಯಾಕೆ ಮಾಡಬೇಕೆನ್ನುವುದನ್ನು ತಿಳಿದುಕೊಳ್ಳುವುದಿಲ್ಲ. ಅದೊಂದು ತಾತ್ವಿಕ ಪ್ರಶ್ನೆಯಾಗಿದೆ. ನೃತ್ಯ ಯಾಕೆ ಮಾಡಬೇಕು ಎಂಬುದು ಅರ್ಥವಾದರೆ ಮಾತ್ರ ಅದರೊಂದಿಗೆ ಜೀವಿಸಲು ಸಾಧ್ಯವಿದೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು.
ಅವರು ಇಲ್ಲಿನ ರೋಟರಿ ಭವನದಲ್ಲಿ ಗುರುವಾರ ಸುರಭಿ ರಿ. ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಆಶ್ರಯದಲ್ಲಿ ಸುರಭಿ ವಿಶಂತಿ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗ ಪ್ರದರ್ಶನ ’ನೃತ್ಯಗಾಥಾ’ದ ಪೂರ್ವದಲ್ಲಿ ಮಾತನಾಡಿ ಜಗತ್ತಿನ ರೋದನವನ್ನು ತನ್ನದೆನ್ನುವ ಶಿವ ಕಲಾವಿದರ ಆರಾಧ್ಯ ದೈವ. ಹಾಗಾಗಿಯೇ ಜಗತ್ತಿನ ಸಂಕಟಗಳು ಕಲಾವಿದರ ಸಂಕಟವೂ ಆಗಿದೆ. ಜಗತ್ತಿನ ಪ್ರತಿ ಜೀವಿಯೂ ಕಲಾವಿದರಿಗೆ ಬಂಧುವಾಗುತ್ತದೆ ಎಂದರು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆನಡಾ ಸಂಶೋಧಕ ಗ್ರಾಂಟ್ ಡೆಂಪ್ಸೆ, ರಂಗಕರ್ಮಿ ಶೀತಲ್ ಭಟ್, ರೋಟರಿ ಕ್ಲಬ್ ಬೈಂದೂರು ಕಾರ್ಯದರ್ಶಿ ಮಂಜುನಾಥ ಮಹಲೆ ಉಪಸ್ಥಿತರಿದ್ದರು.
ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಆನಂದ ಮದ್ದೋಡಿ ಸ್ವಾಗತಿಸಿ, ನಿರ್ದೇಶಕ ಸುಧಾಕರ ಪಿ. ಬೈಂದೂರು ವಂದಿಸಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ನೃತ್ಯಗಾಥಾ ಏಕವ್ಯಕ್ತಿ ರಂಗ ಪ್ರದರ್ಶದಲ್ಲಿ ವಿದುಷಿ ಅನಘಶ್ರೀ ಉಡುಪಿ ನಟಿಸಿದ್ದು, ಸುಧಾ ಆಡುಕಳ ರಚಿಸಿ, ಡಾ. ಶ್ರೀಪಾದ್ ಭಟ್ ನಿರ್ದೇಶಿಸಿದ್ದರು.