ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ‘ನಮ್ಮ ಪ್ರೀತಿ’ ಎಂಬ ಗೆಳೆಯರ ತಂಡ ಬೆಂಗಳೂರಿನ “ಜನಸೇವಾ ಸಮೃದ್ಧಿ ಎಜುಕೇಶನ್ ಹಾಗೂ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸಿ ಅನ್ನದಾನ ಮಾಡಿದರು. ಜೊತೆಗೆ ತಮ್ಮ ಕೈಯಲ್ಲಿ ಆದಷ್ಟು ದೇಣಿಗೆ ನೀಡಿದರು. ಅಲ್ಲದೇ ಮನೆಯಲ್ಲೇ ಆಹಾರ ತಯಾರಿಸಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಿಕ್ಷುಕರಿಗೆ ಆಹಾರ ವಿತರಿಸಿದರು.
‘ನಮ್ಮ ಪ್ರೀತಿ’ ತಂಡದ ನಾಯಕ ರಾಜ್ ಅವರ ನೇತೃತ್ವದಲ್ಲಿ ನಡೆದು ಬರುತ್ತಿರುವ ಉತ್ತಮ ಕಾರ್ಯಕ್ಕೆ ಸದಸ್ಯರಾದ ಸತೀಶ್, ಅನಿತಾ ಹೊನ್ನಪ್ಪ, ಗೀತಾ, ಪ್ರತಾಪ್, ಮಂಜುನಾಥ ಪಿ, ಪವನ್, ರಂಜಿತ್, ಅನಿತಾ ಎಂ, ಪ್ರವೀಣ್ ಜೆ.ಎಸ್, ಗಣೇಶ್, ದಿನೇಶ್, ಬ್ರಿಜೇಶ್, ಪ್ರಿಯಾಂಕ, ವಿಜಿತ್, ಕುಶಾಲ್, ರವಿಕಿರಣ್, ಬಿಂದು, ಜ್ಯೋತಿ, ಜವಾಜ್, ವಿದ್ಯಾ, ಶಿವರಾಜ್, ಚಂದ್ರ ಪಿ, ನಾಗೇಶ್, ಚೇತನ ಕುಮಾರ್, ನಿಖಿಲ್ ಕುಮಾರ್, ತಾಜ್, ಶಿವು ನಾಯಕ್, ಮಂಜುನಾಥ ಜಿ.ಕೆ, ಗುರಪ್ಪ, ಭವ್ಯ, ಅರುಣ್, ಉಮೇಶ್ ಜೆ.ಆರ್, ಮಹೇಶ್, ಸಚಿನ್, ಉಮಾ, ರಮ್ಯಾ, ಮಂಜುನಾಥ ಕೆ.ಎಸ್, ನಾಗೇಂದ್ರ, ಸುರೇಂದ್ರ, ಮಂಜುನಾಥ ಬಾಬು, ಕೃಷ್ಣ ಕಾರಂತ, ಧರ್ಮಶ್ರೀ, ಲತೇಶ್ ಕುಮಾರ್ ಇವರ ಬೆಂಬಲವಿದ್ದು, ತಂಡದ ಕಾರ್ಯವೂ ಯಶಸ್ವಿಯಾಗಿ ಜರುಗಿದೆ.