ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ರಾಮಕ್ಷತ್ರಿಯ ಗಣೇಶೋತ್ಸವ ಸಮಿತಿ ಗಂಗೊಳ್ಳಿ ಇದರ 26ನೇ ವರ್ಷದ ಗಣೇಶೋತ್ಸವದ ಸಂದರ್ಭ ಭಕ್ತರಿಗೆ ಗಿಡಗಳನ್ನು ವಿತರಿಸಲಾಯಿತು.
ಗಣೇಶೋತ್ಸವದಲ್ಲಿ ಆಯೋಜಿಸಲಾದ ಮನೆಗೊಂದು ಮರ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಗಿರೀಶ್ ದೇವರುಮನೆ, ಕಾರ್ಯದರ್ಶಿ ರಾಮಪ್ರಸಾದ್ ಸಸಿಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಸಕಲಾತಿ ನಾಗರಾಜ್, ಬಟ್ವಾಡಿ ಸಂದೀಪ್, ವಿಶ್ವನಾಥ್, ಉಗ್ರಾಣಿ ಲಕ್ಷ್ಮೀನಾರಾಯಣ, ಮಹೇಶ್, ಮಾಪಾರಿ ಸುರೇಶ್ ನೋಡಿಕೊಂಡರು.










