ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿ. ಸಿ. ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಕುಂದಗನ್ನಡದ ಚಲನಚಿತ್ರ ಪ್ರೊಡಕ್ಷನ್ ನಂ. 01 ಮುಹೂರ್ತ ಗುರುವಾರ ಬಸ್ರೂರಿನ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.
ಚೊಚ್ಚಲ ಚಿತ್ರದ ಮುಹೂರ್ತವನ್ನು ಬಸ್ರೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅವರು ನೆರವೇರಿಸಿದರು. ಈ ಸಂದರ್ಭ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್‌ಐ ಶ್ರೀಧರ್ ನಾಯಕ್, ಮಹಾದೇವ ಕನ್ಸಕ್ಷನ್ ಮಂಗಳೂರು ಇದರ ಪ್ರವೀಣ್ ಕಮಾರ್, ಸುರೇಶ್ ನಾಯಕ್, ಸದಾಚಂದ್ರ ಬಸ್ರೂರು, ಗೋಪಾಲ್ ಪೂಜಾರಿ ಗರಡಿಮನೆ, ಶಾಶ್ವತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕರಾವಳಿಯ ವಜ್ರಮುನಿ ಖ್ಯಾತಿಯ ಓಂ ಗುರು ಬಸ್ರೂರು ಮೊದಲ ಬಾರಿಗೆ ನಿರ್ದೇಶನವನ್ನು ಕೈಗೆತ್ತಿಕೊಂಡಿದ್ದಾರೆ. ಕರಾವಳಿ ಸುಧೀರ್ ಖ್ಯಾತಿಯ ಚಂದ್ರಶೇಖರ್ ಬಸ್ರೂರು ಓಂಗುರು ಅವರಿಗೆ ಸಾಥ್ ನೀಡಿದ್ದಾರೆ. ಚಿತ್ರದ ನಾಯಕ ನಟನಾಗಿ ಕರುಣಾಕರ್, ನಾಯಕ ನಟಿಯಾಗಿ ಕವನಾ ಜಗ್ವಾರ್ ಮತ್ತು ಹರ್ಷಿತಾ ಕಾಣಿಸಿಕೊಳ್ಳಲಿದ್ದು, ಮುಖ್ಯ ಭೂಮಿಕೆಯಲ್ಲಿ ಸಂದೇಶ್ ಶೆಟ್ಟಿ ಆಜ್ರಿ, ನಾಗರಾಜ್ ಗೋಳಿ, ರಘು ಪಾಂಡೇಶ್ವರ್, ಸತ್ಯನಾರಾಯಣ್ ಬಸ್ರೂರು, ಪ್ರಭಾಕರ್ ಕುಂದರ್, ಸ್ವರಾಜ್ಯ ಲಕ್ಮ್ಷೀ, ಅಶ್ವತ್ ಆಚಾರ್ಯ, ನಾಗರಾಜ್ ತೆಕ್ಕಟ್ಟೆ, ರಸಿಕ್ ಶೆಟ್ಟಿ, ಕಿರಣ್ ಕುಂದಾಪುರ ಮೊದಲಾದವರು ಕಾಣಿಸಿಕೊಳ್ಳಲಿದ್ದಾರೆ.
ಉಳಿದಂತೆ ಸಾಹಸ ನಿರ್ದೇಶನದಲ್ಲಿ ನಟರಾಜ್ ವಿ. ಎನ್, ಚಿತ್ರಕ್ಕೆ ಉತ್ತಮ್ ಸಾರಂಗ್ ರವರು ಸಂಗೀತ ಸಂಯೋಜಿಸಲ್ಲಿದ್ದಾರೆ. ಹಾಗೂ ಸ್ಯಾಂಡಲ್‌ವುಡ್ ಯುವ ಪ್ರತಿಭೆ ಪ್ರವೀಣ್ ನಾಡ ಅವರು ಛಾಯಾಗ್ರಹಣ ಮಾಡಲಿದ್ದಾರೆ.
ಈ ಚಿತ್ರದ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಚಂದ್ರಶೇಖರ್ ಬಸ್ರೂರು ಮತ್ತು ಓಂ ಗುರು ಬಸ್ರೂರು ಇವರು ನಿರ್ವಹಿಸಲಿದ್ದಾರೆ.