ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆನಡಾದ ಸೆಂಟ್ ಜೋನ್ಸ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಅಂತರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಕುಂದಾಪುರದ ವಿಶ್ವನಾಥ ಭಾಸ್ಕರ ಗಾಣಿಗ ಬಾಳಿಕೆರೆ 2 ಚಿನ್ನ ಹಾಗೂ 2 ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಡೆಡ್ ಲಿಫ್ಟ್ನಲ್ಲಿ ನೂತನ ದಾಖಲೆ ಬರೆದಿದ್ದಾರೆ.
ತಾಲೂಕಿನ ದೇವಲ್ಕುಂದದವರಾದ ವಿಶ್ವನಾಥ ಗಾಣಿಗ ಅವರು ಡೆಡ್‌ಲಿಫ್ಟಿಂಗ್‌ನಲ್ಲಿ 327.5 ಕೆ.ಜಿ. ದಾಖಲೆಯನ್ನು ಎತ್ತುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ಸ್ನ್ಯಾಚ್’ನಲ್ಲಿ 295.1 ಕೆ.ಜಿ. ಬೆಂಚ್’ಪ್ರೆಸ್ ನಲ್ಲಿ 180ಕೆ.ಜಿ. ಬಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದುಕೊಂಡಿದ್ದಾರೆ. ವಿಶ್ವನಾಥ ಗಾಣಿಗ ಕಾಮನ್ವೆಲ್ತ್ನಲ್ಲಿ ಒಟ್ಟು 802.5 ಕೆ.ಜಿಯೊಂದಿಗೆ ಚಿನ್ನ ಗೆದ್ದುಕೊಂಡಿದ್ದಾರೆ.










