Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮರೆಯಾದ ಕರಾವಳಿಯ ರಂಗ-ಸಾಹಿತ್ಯ ಕೊಂಡಿ ಜಿ. ಕೆ. ಐತಾಳ್
    ಊರ್ಮನೆ ಸಮಾಚಾರ

    ಮರೆಯಾದ ಕರಾವಳಿಯ ರಂಗ-ಸಾಹಿತ್ಯ ಕೊಂಡಿ ಜಿ. ಕೆ. ಐತಾಳ್

    Updated:21/09/2019No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಕುಂದಾಪುರ: ಮೊನಚು ಬರಹಗಳಿಂದ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಹಿರಿಯ ಸಾಹಿತಿ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಜಿ.ಕೆ. ಐತಾಳ್ (68) ಗುರುವಾರ ಕೋಟೇಶ್ವರದ ಸ್ವಗೃಹದಲ್ಲಿ ನಿಧನರಾದರು.

    Click Here

    Call us

    Click Here

    1951ನೇ ಜೂ.25ರಂದು ಜನಿಸಿದ್ದ ಅವರು ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶಿಕ್ಷಣಾಭ್ಯಾಸ ಮುಗಿಸಿದ್ದರು. ನಂತರ ಕರ್ಣಾಟಕ ಬ್ಯಾಂಕ್ ಸೇರಿದ್ದ ಜಿ.ಗೋಪಾಲಕೃಷ್ಣ ಐತಾಳರು ವಿಜ್ಞಾನ ಪದವೀಧರರಾಗಿದ್ದರೂ ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಮೊದಮೊದಲು ಸಾಮಾನ್ಯ ನಾಟಕ ವಿಮರ್ಶೆಗಳ ಮೂಲಕ ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದರು.

    ಸಾಹಿತ್ಯ ಕ್ಷೇತ್ರದಲ್ಲಿನ ಆಸಕ್ತಿ, ರಂಗ ಚಟುವಟಿಕೆಯ ಮೇಲೆ ಅವರಿಗಿದ್ದ ಮೋಹ ಬಹು ಬೇಗನೆ ಅವರನ್ನು ವೃತ್ತಿಪರ ಬರಹಗಾರರನ್ನಾಗಿಸಿತ್ತು. ಜಿ.ಕೆ. ಐತಾಳರ ಬರಹಗಳಲ್ಲಿನ ವಾಕ್ಯಗಳು ಕ್ಲಿಷ್ಟವಾಗಿದ್ದರೂ, ಓದುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದವು. ಈ ಕಾರಣಕ್ಕಾಗಿಯೇ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅವರದೇ ಆದ ಅಭಿಮಾನಿ ಬಳಗವಿತ್ತು. ‘ನವಭಾರತ’ ಪತ್ರಿಕೆಯಲ್ಲಿ ‘ಕಡಲ ತಡಿಯ ಕಲಾವಿದರು’ ಎನ್ನುವ ಬರಹದ ಮೂಲಕ ಎಲೆಮರೆಯ ಕಲಾವಿದರನ್ನು ಸಮಾಜದ ಮುಖ್ಯಭೂಮಿಕೆಯಲ್ಲಿ ಕರೆ ತರುವ ಪ್ರಯತ್ನ ಮಾಡಿದ್ದರು.

    ರಂಗಭೂಮಿ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ಅವರ ರಂಗಾಸಕ್ತಿಯನ್ನು ಗಮನಿಸಿದ್ದ ಜಿಲ್ಲೆಯ ಪ್ರಸಿದ್ಧ ರಂಗಾಸಕ್ತ ಸಂಸ್ಥೆಗಳು ತಮ್ಮಲ್ಲಿನ ರಂಗ ಚಟುವಟಿಕೆಯ ಮುಖ್ಯ ಭೂಮಿಕೆಯಲ್ಲಿ ಐತಾಳರನ್ನು ಗುರುತಿಸುತ್ತಿದ್ದರು. ಉಡುಪಿಯ ರಂಗಭೂಮಿ, ಬೈಂದೂರಿನ ಲಾವಣ್ಯ, ಕೋಟ ಮಿತ್ರ ಮಂಡಳಿ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ಸಂಸ್ಥೆಗಳು ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿರುತ್ತಿದ್ದರು.

    ಅವರ ನಾಟಕ ವಿಮರ್ಶಾ ಲೇಖನಗಳು ರಾಜ್ಯದ ಪ್ರಮುಖ ದಿನಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಸಮರ್ಪಣ’, ‘ಕಾಟುಮೂಲೆ ಎಸ್ಟೇಟ್’, ‘ಕುಜ’, ‘ಮಿನುಗು ಮಿನುಗೆಲೆ ನಕ್ಷತ್ರ’, ‘ಮೇರೆ ಭಾರತ್ ಮಹಾನ್’ ಕಾದಂಬರಿಗಳು ಪ್ರಕಟವಾಗಿದ್ದವು.

    Click here

    Click here

    Click here

    Call us

    Call us

    ಅನಕೃ ಅವರ ನೆನಪಿನಲ್ಲಿ ಕಾದಂಬರಿಕಾರರಿಗಾಗಿ ಸ್ಥಾಪಿಸಿದ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿ ಪಡೆದ ಹಿರಿಮೆ ಅವರದ್ದಾಗಿತ್ತು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಮಯ ಮತ್ತು ಶಿಸ್ತನ್ನು ಪಾಲನೆ ಮಾಡಬೇಕು: ಕವಿತಾ ಎಂ.ಸಿ

    22/08/2026

    ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್‌ ಪ್ರಶಸ್ತಿ ಪ್ರದಾನ

    22/08/2026

    ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    22/08/2026
    Leave A Reply Cancel Reply

    nineteen − 3 =

    Call us

    Click Here

    Call us

    Call us

    Call us
    Highest Viewed Recently
    • ವಿದ್ಯಾರ್ಥಿಗಳನ್ನು ಶ್ರುತಿ ಬದ್ಧಗೊಳಿಸುವುದೇ ಶಿಕ್ಷಣದ ಮುಖ್ಯ ಉದ್ದೇಶ: ಡಾ. ಆಳ್ವ ಅಭಿಮತ
    • ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಮಯ ಮತ್ತು ಶಿಸ್ತನ್ನು ಪಾಲನೆ ಮಾಡಬೇಕು: ಕವಿತಾ ಎಂ.ಸಿ
    • ಉಡುಪಿ: ಕಲಾವಿದರಿಂದ ಅರ್ಜಿ ಆಹ್ವಾನ
    • ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್‌ ಪ್ರಶಸ್ತಿ ಪ್ರದಾನ
    • ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.