ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೋಡಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಸೌಹಾರ್ದ ೨೦೧೯ರ ಸಮಾರೋಪ ಸಮಾರಂಭ ಕುಂದಾಪುರದ ಗಾಂಧಿ ಮೈದಾನದಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಇಂದಿನ ಕ್ರೀಡಾಕೂಟದಲ್ಲಿ ಹಲವರು ಗೆದ್ದಿದಾರೆ, ಹಲವರು ಸೋತಿದ್ದಾರೆ. ಸೋತ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮುಂದಿನ ದಿನ ತಾವೆಲ್ಲರೂ ದೊಡ್ಡ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಎನ್ನುವುದರ ಮೂಲಕ, ಸೊಲೇ ಗೆಲುವಿನ ಸೋಪಾನ ಎಂದು ಸ್ಪೂರ್ತಿಯ ಮಾತುಗಳನ್ನು ನುಡಿದರು. ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಶ್ರೀಯುತ ಕೆ.ಎಮ್. ಅಬ್ದುಲ್ ರೆಹಮಾನ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ, ಕೋಡಿ ವಹಿಸಿಕೊಂಡಿದ್ದರು.
ಹಾಗೆಯೇ ಮುಖ್ಯ ಅತಿಥಿಗಳಾಗಿ ಯಶಪಾಲ್ ಸುವರ್ಣ, ಅಧ್ಯಕ್ಷರು, ಜಿಲ್ಲಾ ಮೀನುಗಾರರ ಸಹಕಾರ ಸಂಘ, ಗಣೇಶ ಶೆಟ್ಟಿ ಮೊಳಹಳ್ಳಿ, ಲೆಕ್ಕ ಪರಿಶೋಧಕರು ಕುಂದಾಪುರ, ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು ಬ್ಲಾಕ್ ಕಾಂಗ್ರೇಸ್, ಷೇಕ ಅಬುಮೊಹಮ್ಮದ್, ಅಧ್ಯಕ್ಷರು, ನುಸ್ರತುಲ್ ಮಸಾಕಿನ್ ಅಸೋಸಿಯಷನ್ ಕೋಡಿ, ಶಶಿಧರ ಹೆಮ್ಮಾಡಿ, ಅಧ್ಯಕ್ಷರು ಪತ್ರಕರ್ತರ ಸಂಘ, ಕುಂದಾಪುರ, ಶ್ರೀ ಮಾರುತಿ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ದಿನೇಶ ಕುಮಾರ, ಕ್ರೀಡಾ ಮೇಲ್ವಿಚಾರಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ, ಮಾಧವ ಭಟ್, ಅಧ್ಯಕ್ಷರು ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘ, ಉಡುಪಿ, ದೋಮ ಚಂದ್ರಶೇಖರ್, ನಿರ್ದೇಶಕರು, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ, ಡಾ. ಶಮೀರ್, ಪ್ರಾಂಶುಪಾಲರು, ಬ್ಯಾರೀಸ್ ಪದವಿ ಪೂರ್ವ ಕಾಲೇಜು, ಕೋಡಿ, ಸಿದ್ದಪ್ಪ ಕೆ.ಎಸ್. ಪ್ರಾಂಶುಪಾಲರು, ಬ್ಯಾರೀಸ್ ಬಿ.ಎಡ್ ಕಾಲೇಜು ಕೋಡಿ, ನಾಗರಾಜ್ ಶೆಟ್ಟಿ, ತಾಲೂಕು ಪದವಿ ಪೂರ್ವ ಕ್ರೀಡಾ ಸಂಯೋಜಕರು, ಮಂಜು ಬಿಲ್ಲವ ಸಾಮಾಜಿಕ ಕಾರ್ಯಕರ್ತರು, ಕೆ.ಆರ್ ನಾಯ್ಕ, ಇಲೆಕ್ಟ್ರೀಕಲ್ ಕಾಂಟ್ರಾಕ್ಟರ್, ಫಿರದೋಸ್, ಪಾಂಶುಪಾಲರು, ಬ್ಯಾರೀಸ್ ಡಿ.ಎಡ್ ಕಾಲೇಜು ಕೋಡಿ, ಜಯಂತಿ ಮುಖ್ಯೋಪಾಧ್ಯಾಯರು, ಹಾಜಿ ಕೆ ಮೊಹಿದ್ದೀನ್ ಅನುದಾನಿತ ಕನ್ನಡ ಪ್ರೌಢ ಶಾಲೆ ಕೋಡಿ, ದುರ್ಗಿ ಪಟೆಗಾರ್ ಅಧ್ಯಾಪಕಿ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೋಡಿ, ಸುಮಿತ್ರ, ಮುಖ್ಯಸ್ಥೆ, ಬೀಬಿ ಫಾತಿಮಾ ಅಂಗನವಾಡಿ ಕೋಡಿ, ಶಂಕರ್ ಪೂಜಾರ,ಮತ್ತು ಅಬ್ದುಲ್ಲಾ ಕೆ. ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಹಾಗೂ ವರ್ಗೀಸ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಉಡುಪಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವೈಯಕ್ತಿಕ ಚಾಂಪಿಯನ್ ಪಡೆದು ಕೊಂಡವರು: ಬಾಲಕರ ವಿಭಾಗದಲ್ಲಿ ಅಖಿಲೇಶ್, ವಿವೇಕ ಪದವಿ ಪೂರ್ವ ಕಾಲೇಜು ಕೋಟ, ಬಾಲಕಿಯರ ವಿಭಾಗದಲ್ಲಿ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತೀಕ್ಷಾ ಮತ್ತು ಅಂಕಿತಾ, ಮಿಲಾಗ್ರೆಸ್ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ ಸಂತೆಕಟ್ಟೆ ಪಡೆದಿರುತ್ತಾರೆ.
ಬಾಲಕರ ವಿಭಾಗದಲ್ಲಿ ಮಿಲಾಗ್ರೆಸ್ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ಸಮತೆಕಟ್ಟೆ, ಹಾಗೂ ಬಾಲಕಿಯರ ವಿಭಾಗದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ಇವರು ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ.
ಯಶ್‌ಪಾಲ್ ಸುವರ್ಣ, ಅಧ್ಯಕ್ಷರು, ಜಿಲ್ಲಾ ಮೀನುಗಾರರ ಸಹಕಾರ ಸಂಘ, ಶ್ರೀ ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬ್ಲಾಕ್ ಕಾಂಗ್ರೇಸ್ ಹಾಗೂ ಅಬ್ದುಲ್ ರೆಹಮಾನ್, ಅಧ್ಯಕ್ಷರು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಕೋಡಿ ಇವರು ಧ್ವಜಾ ಅವರೋಹಣವನ್ನು ನಡೆಸಿದರು. ಸುರೇಂದ್ರ ಶೆಟ್ಟಿಯವರು ಆಗಮಿಸಿದ ಅತಿಥಿ ಗಣ್ಯರೆಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಇಲಿಯಾಸ್, ದೈಹಿಕ ಶಿಕ್ಷಣ ಶಿಕ್ಷಕರು, ಹಾಜಿ ಕೆ ಮೊಹಿದ್ದೀನ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೋಡಿ ಕುಂದಾಪುರ ಇವರು ವಂದಿಸಿದರು. ಕಾರ್ಯಕ್ರಮವನ್ನು ಅರ್ಜಿತಾ ಮ್ತತು ಮಮತಾ ನಿರ್ವಹಿಸಿದರು.