ಆಧಾರ್‌ ಕಾರ್ಡ್‌ ಆದಾಲತ್‌: ನಿರೀಕ್ಷೆಗೂ ಮೀರಿದ ಜನಸಂದಣಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್‌ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯಲ್ಲಿ ಭಾನುವಾರ ನಡೆದ ಆಧಾರ್‌ ಕಾರ್ಡ್‌ ಆದಾಲತ್‌ನಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿವಿಧ ಭಾಗಗಳ ಸಾವಿರಾರು ಜನರು ಭಾಗವಹಿಸಿದ್ದರು.

Call us

Click Here

ಭಾನುವಾರ ಬೆಳಿಗ್ಗೆ 7ರ ವೇಳೆಗಾಗಲೇ ಹಳ್ಳಿ ಹಾಗೂ ನಗರ ಪ್ರದೇಶಗಳಿಂದ ಸಾವಿರಾರು ಜನರು ಬಂದಿದ್ದರು. ಗಂಡ, ಹೆಂಡತಿ ಹಾಗೂ ಮಕ್ಕಳ ಸಮೇತವಾಗಿ ಸಾರ್ವಜನಿಕರು ಬಂದಿದ್ದರಿಂದ ಅಂಚೆ ಕಚೇರಿಯ ಆವರಣ ಭರ್ತಿಯಾಗಿತ್ತು. ಜನರು ತಮ್ಮ ಅವಕಾಶಕ್ಕಾಗಿ ಕಚೇರಿ ಹೊರಗಿನ ಚಿಕ್ಕನ್‌ಸಾಲ್‌ ರಸ್ತೆಯಿಂದ ಮುಖ್ಯರಸ್ತೆಯ ಪುರಸಭಾ ಕಚೇರಿಯವರೆಗೂ ಸರದಿ ಸಾಲಿನಲ್ಲಿ ನಿಂತಿದ್ದರು.

ನಿರೀಕ್ಷೆಗೂ ಮೀರಿ ಜನರು ಜಮಾಯಿ ಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸ್‌ ಹಾಗೂ ಗೃಹ ರಕ್ಷಕ ಸಿಬ್ಬಂದಿ ಹರಸಾಹಸಪಟ್ಟರು. ಆಧಾರ್‌ ಕಾರ್ಡ್‌ನಲ್ಲಿನ ದೋಷ ಸರಿಪಡಿಸಿಕೊಳ್ಳಲು ಬಯಸಿ ಬಂದಿದ್ದ ನೂರಾರು ಜನರು ಅದಾಗಲೇ ಸೇರಿದ್ದ ಜನಸ್ತೋಮವನ್ನು ಕಂಡು ಬೆದರಿ, ಹಿಂತಿರುಗಿದರು.

‘ಪ್ರಾರಂಭದಲ್ಲಿ ಐದು ಯಂತ್ರಗಳನ್ನು ಹಾಕಲಾಗಿತ್ತು. ನಂತರ ಬಂದಿರುವ ಜನಸ್ತೋಮವನ್ನು ನೋಡಿ ಇನ್ನೂ ಎರಡು ಯಂತ್ರಗಳನ್ನು ಹೆಚ್ಚುವರಿಯಾಗಿ ಹಾಕಲಾಯಿತು. ಪ್ರತಿಯೊಂದು ಯಂತ್ರದಲ್ಲಿಯೂ ಗರಿಷ್ಠ 50 ಆಧಾರ್‌ ಕಾರ್ಡ್‌ಗಳ ಬದಲಾವಣೆಕಾರ್ಯ ಮಾಡಲು ಸಾಧ್ಯ. ರಜಾ ದಿನವಾಗಿದ್ದರೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಬಂದಿರುವ ಎಲ್ಲರಿಗೂ ಇಂದು ಅವಕಾಶ
ಮಾಡಿಕೊಡಲು ಸಾಧ್ಯವಿಲ್ಲ. ಸಿಬ್ಬಂದಿ ಲಭ್ಯವಿರುವ ಬೇರೆ ದಿನಗಳನ್ನು ನೋಡಿಕೊಂಡು ಅವಕಾಶ ಮಾಡಿಕೊಡುವ ಬಗ್ಗೆ ಇಲಾಖೆ ತೀರ್ಮಾನ ಕೈಗೊಳ್ಳಲಿದೆ’ ಅಂಚೆ ಕಚೇರಿಯ ಅಧಿಕಾರಿಗಳು ತಿಳಿಸಿದರು.

Leave a Reply