ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮನೆ, ನಿವೇಶನ ರಹಿತರಿಗೆ ಸರಕಾರಿ/ಖಾಸಗಿ ಜಾಗ ಕರೀದಿಸಿ ಹಕ್ಕು ಪತ್ರ ಮಂಜೂರು ಮಾಡಬೇಕೆಂದು ಒತ್ತಾಯಿಸಿ, ದಿನಾಂಕ ೧೮ ನವಂಬರ್ ೨೦೧೯ ಸೋಮವಾರದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಜರಗುವ ನಿವೇಶನ ರಹಿತರ ಭೂಮಿ ಹಕ್ಕಿನ ಬೃಹತ್ ಹೋರಾಟ, ಧರಣಿ ಮುಷ್ಕರಕ್ಕೆ ಸಿಐಟಿಯು ಜಿಲ್ಲಾ ಸಮಿತಿಗೆ ಸಂಯೋಜಿಸಲ್ಪಟ್ಟ ಎಲ್ಲಾ ಕಾಮಿ೯ಕ ಸಂಘಗಳ ಸಂಪೂಣ೯ ಬೆಂಬಲ ಕೊಡಲಾಗುವುದು ಎಂದು ಸಿಐಟಿಯು ಜಿಲ್ಲಾ ಕಾಯ೯ದಶಿ೯ ಎಚ್. ನರಸಿಂಹ ಹೇಳಿದರು.
ತಲ್ಲೂರು ಮೂತೆ೯ದಾರರ ಸಭಾಭವನದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಸಮಾವೇಶದಲ್ಲಿ ಜರುಗಿದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್ ನಿವೇಶನ ರಹಿತರ ಈ ನಿಣಾ೯ಯಕ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ನಿವೇಶನ ರಹಿತ ಫಲಾನುಭವಿಗಳಿಗಳು ಭಾಗವಹಿಸಬೇಕು ಎಂದು ಕರೆ ಕೊಟ್ಟರು. ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖಂಡರಾದ ನಾಗರತ್ನ ನಾಡ, ಅಮ್ಮಯ್ಯ ಪೂಜಾರಿ, ರಾಘವೇಂದ್ರ ಉಪ್ಪುಂದ ವೇದಿಕೆಯಲ್ಲಿ ಇದ್ದರು.