ರಾ.ಹೆ-66 ದುರವಸ್ಥೆ ವಿರುದ್ಧ ಹೋರಾಟ: ಕುಂದಾಪುರದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹೆದ್ದಾರಿ ಜಾಗೃತ ಸಮಿತಿ ನೇತೃತ್ವದಲ್ಲಿ ಶನಿವಾರ ಕುಂದಾಪುರದ ನಾಗರಿಕರು ಸಭೆ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯ ಆಗರವಾಗಿರುವ ನಗ್ಗೆ ಅಸಮಾಧಾನ ವ್ಯಕ್ತಪಡಿದ್ದಲ್ಲದೇ, ಸಂಘಟಿತ ಹೋರಾಟದ ಮೂಲಕ ಜನಪ್ರತಿನಿಧಿಗಳು, ಗುತ್ತಿಗೆದಾರರು ಹಾಗೂ ಸರಕಾರದ ಗಮನ ಸೆಳೆಯುವುದು, ಕಾಮಗಾರಿಯ ಅವ್ಯವಸ್ಥೆ ಹಾಗೂ ವಿಳಂಬ ನೀತಿಯನ್ನು ತೀವ್ರವಾಗಿ ಖಂಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

Call us

Click Here

Video

ಸಭೆಯಲ್ಲಿ ಹೆದ್ದಾರಿ ಜಾಗೃತ ಸಮಿತಿಯ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊಂಡ ಕಳೆದ 10 ವರ್ಷಗಳಲ್ಲಿ ಓರ್ವ ಅಧಿಕಾರಿಯೂ ಈ ಭಾಗಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ. ಸುರತ್ಕಲ್‌ನಿಂದ ಕುಂದಾಪುರದ ತನಕ 76ಕಿ.ಮೀ ಉದ್ದದ ಹೆದ್ದಾರಿ ಚತುಷ್ಪಥ ಕಾಮಗಾರಿ ಶೇ.90ರಷ್ಟು ಮುಗಿದೆದೆ ಎಂದು ಹೇಳುತ್ತಾರೆ ಆದರೆ ಕಾಮಗಾರಿಯ ಸಮರ್ಪಕ ಬ್ಲೂಪ್ರಿಂಟ್ ಯಾರ ಬಳಿಯೂ ಇಲ್ಲ. ಈ ಭಾಗದ ಯಾವೊಬ್ಬ ಜನಪ್ರನಿಧಿಗಳಿಗೂ ಇದರ ಸಮರ್ಪಕ ಮಾಹಿತಿ ಇಲ್ಲ. ರಸ್ತೆ ಮಧ್ಯದಲ್ಲಿ ನೀರು ನಿಲ್ಲುವುದು, ಲೈಟ್, ಬ್ಯಾರಿಕೇಟ್ ಹಾಕಿರುವುದು ಯಾವುದೂ ಕೂಡ ಸಮರ್ಪಕವಾಗಿ ನಡೆದಿಲ್ಲ ಎಂಬುದನ್ನು ಸೂಚಿಸುತ್ತದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಯಾರೊಬ್ಬರಿಗೂ ಉತ್ತರದಾಯಿಗಳಾದೇ ಅವೈಜ್ಞಾನಿಕ ಕಾಮಗಾರಿಗೆ ಮಾಡಿ ಮುಗಿಸುತ್ತಿರುವುದು ವಿಷಾದನೀಯ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ ಹೆದ್ದಾರಿ ಕಾಮಗಾರಿ ರಾಜಕೀಯ ವಸ್ತುವಾಗಿ ಪರಿಣಮಿಸಿದೆ. ಆದರೆ ಇಲ್ಲಿ ರಾಜಕೀಯ ಮರೆತು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಕೇವಲ ಕುಂದಾಪುರದವರ ಸಮಸ್ಯೆ ಮಾತ್ರವೇ ಆಗಿರದೇ, ಕುಂದಾಪುರಕ್ಕೆ ಬರುವ ಪ್ರತಿ ಗ್ರಾಮದ ಸಮಸ್ಯೆಯೂ ಆಗಿದೆ. ಹಾಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳು ವಿಶೇಷ ಸಭೆ ಕರೆದು ನಿರ್ಣಯ ಮಾಡಲಿ ಎಂದು ಆಗ್ರಹಿಸಿದರು.

Click here

Click here

Click here

Click Here

Call us

Call us

ಸಿಪಿಎಂ ಪಕ್ಷದ ಮುಖಂಡ ವೆಂಕಟೇಶ ಕೋಣಿ ಮಾತನಾಡಿ ಈ ಭಾಗದ ಶಾಸಕರು ಸಂಸದರು ಹೆದ್ದಾರಿ ಸಮಸ್ಯೆಯ ಬಗೆಗೆ ಹೆಚ್ಚಿನ ಗಮನ ಹರಿಸದಿರುವುದುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಶಿರೂರಿನಲ್ಲಿ ಹೆದ್ದಾರಿಯ ಬಗೆಗೆ ನಡೆದ ಪ್ರತಿಭಟನೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಬೇಕಾದ ಶಾಸಕರೇ ಅವರಿಗೆ ಮನವಿ ನೀಡಿ ಹೋಗಿರುವುದು ವಿಷಾದನೀಯ. ಸಿಪಿಎಂ ಪಕ್ಷ ಇನ್ನು ಮುಂದೆ ರಸ್ತೆಗಿಳಿದು ಹೋರಾಟ ನಡೆಸಲು ಚಿಂತನೆ ನಡೆಸಿದೆ ಎಂದರು.

ಕುಂದಾಪುರದ ವಕೀಲ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ ಉದ್ಯಮಿದಾರರೇ ರಾಜಕಾರಣಿಗಳಾಗುತ್ತಿರುವುದರಿಂದ ಅವರಿಗೆ ಜನರ ಹಿತಾಸಕ್ತಿ ಬೇಡವಾಗಿದೆ. ಚತುಷ್ಪಥ ಕಾಮಗಾರಿಯಿಂದಾಗಿ ಸುಂದರ ಕುಂದಾಪುರ ಅವ್ಯವಸ್ಥೆಯ ಆಗರವಾಗಿದೆ. ಆದರೆ ಇದು ಹೀಗೆಯೇ ಮುಂದುವರಿಯಬಾರದು. ಕುಂದಾಪುರದ ಎಲ್ಲಾ ನಾಗರಿಕರುವ, ಅಂಗಡಿ ಮಾಲಕರು, ವಾಹನ ಚಾಲಕರು ಒಗ್ಗಟ್ಟಾಗಿ ನಿಂತು ಪ್ರತಿಭಟಿಸಬೇಕಾಗಿದೆ. ಪ್ರತಿ ಭಾರಿ ಗಡುವ ನೀಡುವ ಬದಲು ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪಟ್ಟುಹಿಡಿಯಬೇಕಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿ ಜನಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜನರ ನಡೆವೆ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳು ಜನರೊಂದಿಗೆ ನಿಂತು ಸಮಸ್ಯೆ ಬಗೆಹರಿಸಬೇಕು ಬದಲಾಗಿ ಮಧ್ಯವರ್ತಿಗಳಾಗಬಾರದು ಎಂದ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನರ ಪರವಾಗಿಲ್ಲ ಎಂಬುದನ್ನು ಅರಿತು ಜನರೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉಗ್ರ ಹೋರಾಟ ನಡೆಸಬೇಕಾಗಿದೆ ಎಂದರು.

ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಸಭೆಯಲ್ಲಿಯ ಅಭಿಪ್ರಾಯವನ್ನು ಕ್ರೋಢೀಕರಿಸಿ ಡಿ.೩ರಂದು ಶಾಸ್ತ್ರೀವೃತ್ತದಲ್ಲಿಯೇ ಮೊದಲ ಹಂತದ ಹೋರಾಟಕ್ಕೆ ದಿನನಿಗದಿಗೊಳಿಸಿದರು. ಮುಂದುವರಿದು ಮಾತನಾಡಿದ ಅವರು ಪ್ರತಿ ಭಾರಿಯೂ ಜನಪ್ರತಿನಿಧಿಗಳು ಸಭೆ ಕರೆದಾಗ ಅಧಿಕಾರಿಗಳು ಗುತ್ತಿಗೆದಾರರು ಗಡುವು ನೀಡಿ ಹೋಗುತ್ತಿದ್ದಾರೆ. ಕಾಟಾಚಾರಕ್ಕೆ ನಾಲ್ಕು ಜನ ಕೆಲಸದವರನ್ನು ಕಾಮಗಾರಿ ಪ್ರದೇಶದಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇಲ್ಲಿಯ ತನಕವೂ ಹೀಗೆಯೇ ನಡೆದು ಬಂದಿದೆ. ಒಂದು ಕಾಮಗಾರಿ ಪೂರ್ಣವಾಗದೇ ಮತ್ತೊಂದು ಕಾಮಗಾರಿ ಕೈಗೊತ್ತಿಕೊಂಡು ಎಲ್ಲವನ್ನೂ ಅಪೂರ್ಣವಾಗಿಸಿರುವುದಲ್ಲದೇ ಜನರ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದರು. ಶಾಸ್ತ್ರೀವೃತ್ತದಲ್ಲಿಯೇ ನಡೆಯಲಿರುವ ಸಭೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ದಿಷ್ಟ ಗಡುವು ಪಡೆದುಕೊಳ್ಳುವುದಲ್ಲದೇ ಪ್ರತಿ ತಿಂಗಳು ಅದರ ಪ್ರಗತಿ ಪರಿಶೀಲನೆಯ ಬಗೆಗೆ ಒಂದು ಮಾನಿಟರಿಂಗ್ ಕಮೀಟಿ ಮಾಡುವ ಬಗ್ಗೆ ಚರ್ಚಿಸಿದರು.

ಸಭೆಯಲ್ಲಿ ಉದಯ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಚಂದ್ರಶೇಖರ ಖಾರ್ವಿ, ನರಸಿಂಹ ಎಚ್., ವೆಂಕಟೇಶ್ ನಾವುಂದ ಮೊದಲಾದವರು ಮಾತನಾಡಿದರು. ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಜಿ.ಕೆ. ಅಬು ಮಹಮ್ಮದ್, ಗಿರೀಶ್ ಕುಂದಾಪುರ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ವಿವಿಧ ಪಕ್ಷಗಳ, ಸಂಘಟನೆಗಳ ಪ್ರತಿನಿಧಿಗಳು ಇದ್ದರು.

Leave a Reply