ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯಲ್ಲಿ ಬುಧವಾರ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.
ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ಹೊಸ ಮರಳು ನೀತಿಗೆ ಅನುಸರಿಸುತ್ತಾ ಕುಳಿತರೆ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಬಡವರಿಗೆ ಮರಳು ಅವಶ್ಯವಿದ್ದು, ಮರಳು ಎಲ್ಲರಿಗೂ ಸುಲಭ ಬೆಲೆಯಲ್ಲಿ ಸಿಗಬೇಕು. ಮರಳು ದಿಬ್ಬ ತೆರವು ಮಾಡಲು ಹೊಸ ಮರಳು ನೀತಿಗೆ ಕಾಯಿದೆ ವಾರಾಹಿ ನದಿಯಲ್ಲಿ ಬಾಕಿಯಾದ ಮರಳು ದಿಬ್ಬ ನಿರ್ಧಿಷ್ಟ ಕಾಲಾವಕಾಶದಲ್ಲಿ ತೆರವು ಮಾಡಲು ನಿರ್ಧಿಷ್ಠ ಸಮಯದಲ್ಲಿ ತೆರೆವು ಮಾಡಲು ಟೆಂಡರ್ ಕರೆಯುವಂತೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್, ವಾರಾಹಿ ಹಾಗೂ ಹಾಲಾಡಿ ನದಿಯಲ್ಲಿ ಮರಳು ತೆಗೆಯುವ ೯ ದಿಬ್ಬ ಗುರುತಿಸಿದ್ದು, ಜಿಲ್ಲಾಧಿಕಾರಿ ಜೊತೆ ಮಾತನಾಡಿ ಟೆಂಡರ್ ಪ್ರಕ್ರಿಯೆಗೆ ಚಾಲನ ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮರಳು ವಿತರಣೆ ಹಾಗೂ ಯುನಿಟ್ಟಿಗೆ ಬೆಲೆ ಫಿಕ್ಸ್ ಮಾಡಿದ್ದು, ಮರಳು ವಾಹನಕ್ಕೆ ಲೋಡ್ ಮಾಡುವುದು ಯಾರೂ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಮರಳು ಲೋಡ್ ಲಾರಿಯವರೇ ಮಾಡಿಕೊಳ್ಳಬೇಕಾ? ಮರಳು ಗುತ್ತ್ತಿಗೆ ಪಡೆದವರೇ ಲೋಡ್ ಮಾಡಬೇಕು. ಲಾರಿಗೆ ಲೋಡ್ ಮಾಡಿದರೆ ಅದಕ್ಕೆ ಎಷ್ಟು ಹಣ ಎನ್ನುವ ಗೊಂದಲವಿದ್ದು, ಮುಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಮರಳು ಲೋಡ್ ಮಾಡುವುದ ಸೇರಿಸಿ ಟೆಂಡರ್ ಕರೆಯುವಂತೆ ಹಾಲಾಡಿ ಸಲಹೆ ಮಾಡಿದ್ದು, ಗಣಿಗಾರಿಕೆ ಅಧಿಕಾರಿಗಳು ಶಾಸಕರ ಸಲಹೆಗೆ ಸಮ್ಮಿತಿ ಸೂಚಿಸಿದರು.
ಮರಳು ವಿತರಣೆ ಕೇಂದ್ರದಲ್ಲಿ ಸರತಿ ಸಾಲು ಹೆಚ್ಚಿದ್ದು, ಮರಳು ಸಾಗಾಟ ಲಾರಿಗಳು ಮರಳಿಗಾಗಿ ಎರಡು ಮೂರು ದಿನ ಕಾಯಬೇಕಾಗುತ್ತದೆ. ಮರಳು ಸರಾಗ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಹಾಲಾಡಿ ಒತ್ತಾಯಿಸಿದರು. ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾದ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್, ಹಿರಿಯ ಭೂ ವಿಜ್ಞಾನಿ ಮಹೇಶ್ ಮುಂತಾದವರು ಇದ್ದರು.
ಇದನ್ನೂ ಓದಿ:
► ನೀರು, ಮರಳಿನ ಸಮಸ್ಯೆಗೆ ಪರಿಹಾರಕ್ಕೆ ಈಗಲೇ ಕ್ರಮ ಕೈಗೊಳ್ಳಿ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ – https://kundapraa.com/?p=33767 .















