ಕುಂದಾಪ್ರ ಡಾಟ್ ಕಾಂ’ ಸುದ್ದಿ.
ಕುಂದಾಪುರ, ನ.26: ಕೋಡಿಯ ಶ್ರೀ ಚಕ್ರಮ್ಮ ದೇವಸ್ಥಾನದ ಆಡಳಿತ ಮೋಕ್ತೇಸರ, ಪಾತ್ರಿ,ಮಾಧವ ಪೂಜಾರಿ ನಿಧನರಾದರು. ಕುಂದಾಪುರದ ಹಿರಿಯ ಧಾರ್ಮಿಕ ನೇತಾರರಲ್ಲಿ ಓರ್ವರಾಗಿದ್ದ ಅವರು ತಮ್ಮ ಬರಹಗಳ ಮೂಲಕವೂ ಜನಪ್ರೀಯರಾಗಿದ್ದರು. ಸ್ವತಹ ಪತ್ರಿಕೆಯನ್ನೂ ನಡೆಸಿದ್ದರು. ಕೋಡಿಯ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲೂ ಪಾಲ್ಗೊಂಡಿದ್ದರು. ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ