ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಲ್ಲಿ ಮದುವೆ ಎಲ್ಲಾ ರೀತಿಯ ತಯಾರಿ ನಡೆದಿತ್ತು. ಇನ್ನೇನು ನಾಳೆ ಎಂದರೆ ಮದುವೆ. ಆದರೆ ಮದುವೆಗಾಗಿ ಬೆಂಗಳೂರಿನಿಂದ ಬರಬೇಕಿದ್ದ ಮಧುಮಗನ ಮಾತ್ರ ನಾಟ್ ರೀಚೆಬಲ್ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಬೈಂದೂರಿನ ಜೆಎನ್‌ಆರ್ ಸಭಾಭವನದಲ್ಲಿ ನಡೆಯಬೇಕಿದ್ದ ಮದುವೆಯೂ ನಿಂತು ಹೋಗಿದೆ. ತಾಲೂಕಿನ ಬಳ್ಕೂರಿನ ಪ್ರವೀಣ ಕುಮಾರ್ ನಾಪತ್ತೆಯಾದ ವ್ಯಕ್ತಿ.
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಉದ್ಯೋಗಿಯಾಗಿರುವ, ಬಳ್ಕೂರು ನಡುಮನೆ ರಾಮಚಂದ್ರ ಎಂಬುವವರ ಪುತ್ರ ಪ್ರವೀಣ ಕುಮಾರನ ಮದುವೆ ನ.29ರಂದು ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವತಿಯೊಂದಿಗೆ ನಿಗದಿಯಾಗಿತ್ತು. ನಾಲ್ಕು ತಿಂಗಳ ಹಿಂದೆಯೇ ಮದುವೆ ನಿಶ್ಚಿತಾರ್ಥವೂ ನಡೆದಿತ್ತು. ಇತ್ತ ಹುಡುಗಿ ಮನೆಯವರು ಮದುವೆಗೆ ಸಂಪೂರ್ಣ ತಯಾರಿ ನಡೆಸಿದ್ದರು. ಆದರೆ ನ.26ರಂದು ಬೆಂಗಳೂರಿನಿಂದ ಬಳ್ಕೂರಿಗೆ ಬರುವುದಾಗಿ ತಿಳಿಸಿದ್ದ ಹುಡುಗ ಮಾತ್ರ ಬಂದಿರಲಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. (ಕುಂದಾಪ್ರ ಡಾಟ್ ಕಾಂ)
ಈ ಮೊದಲೇ ಮದುವೆಯಾಗಿತ್ತೇ?
ಮಗ ನಾಪತ್ತೆಯಾಗಿರುವ ಬಗ್ಗೆ ತಂದೆ ರಾಮಚಂದ್ರ ಅವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಅಪರಾಧ ಕ್ರಮಾಂಕ 84/2019 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಹುಡುಕಾಟ ಆರಂಭಿಸಿದ್ದಾರೆ. ಒಂದು ಮೂಲದ ಪ್ರಕಾರ ಪ್ರವೀಣ ಕುಮಾರನಿಗೆ ಈಗಾಗಲೇ ಬೆಂಗಳೂರಿನಲ್ಲಿ ಮದುವೆ ಆಗಿದೆ ಎನ್ನಲಾಗಿದೆ. ಮನೆಯವರು ವಿಷಯ ತಿಳಿಯದೇ ಊರಿನಲ್ಲಿ ಬೇರೊಂದು ಮದುವೆ ಮಾಡಿಸಲು ಹೊರಟಿದ್ದರು. ನಿಶ್ಚಿತಾರ್ಥ ಮಾಡುವಾಗಲೂ ಸುಮ್ಮನಿದ್ದ ಪ್ರವೀಣ, ಈಗ ಮದುವೆ ತಯಾರಿ ಆದ ಮೇಲೆ ಹೆದರಿ ಬೆಂಗಳೂರಿನಲ್ಲಿ ಉಳಿದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹುಡುಗಿ ಕಡೆಯುವರೂ ಮದುವೆ ತಯಾರಿಗಾದ ವೆಚ್ಚವನ್ನು ವರನ ಕಡೆಯವರೇ ಭರಿಸಬೇಕು. ಇಲ್ಲದಿದ್ದರೆ ವರನ ಕಡೆಯಿಂದಾಗ ಅನ್ಯಾಯಕ್ಕೆ ವಂಚನೆ ದೂರು ದಾಖಲಿಸುವ ಬಗ್ಗೆ ತಿಳಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ)
ಇದನ್ನೂ ಓದಿ:
► ಹಸೆಮಣೆ ಏರಬೇಕಿದ್ದ ವಧು ಪ್ರಿಯಕರನೊಂದಿಗೆ ಎಸ್ಕೇಪ್ – https://kundapraa.com/?p=33987 .