ಹಸೆಮಣೆ ಏರಬೇಕಿದ್ದ ವಧು ಪ್ರಿಯಕರನೊಂದಿಗೆ ಎಸ್ಕೇಪ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮದುಮಗನೊಂದಿಗೆ ಹಸೆಮಣೆ ಏರಬೇಕಿದ್ದ ವಧವೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾಗಿ ಮದುವೆಯಾದ ಘಟನೆ ಮರವಂತೆಯಲ್ಲಿ ನಡೆದಿದೆ. ಮುಹೂರ್ತದ ಸಮಯವಾದರೂ ಮದುಮಗಳು ಬಾರದಿದ್ದರಿಂದ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆಯಬೇಕಿದ್ದ ಮದುವೆ ನಿಂತುಹೋಗಿದೆ.

Call us

Click Here

ತಾಲೂಕಿನ ಮರವಂತೆಯ ಯುವತಿಯೊಂದಿಗೆ ತ್ರಾಸಿ ಯುವಕನ ಮದುವೆ ನಿಶ್ಚಿತಾರ್ಥವಾಗಿ ಇಂದು ಮದುವೆ ನಡೆಯುವುದಿತ್ತು. ಮದುಮಗಳ ಮನೆಯಲ್ಲಿ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವೂ ನಡೆದಿತ್ತು. ಆದರೆ ಬೆಳಗಾಗುತ್ತಿದ್ದಂತೆ ಮದುಮಗಳು ಮಾತ್ರ ಕಾಣೆಯಾಗಿದ್ದಳು. ಮದುವೆ ತಯಾರಿಯಲ್ಲಿದ್ದ ಕುಟುಂಬ ಬೆಳಿಗ್ಗೆ ಐದು ಗಂಟೆಗೆ ಎದ್ದು ನೋಡಿದಾಗ ಯುವತಿ ಕಾಣೆಯಾಗಿರುವುದು ಗೊತ್ತಾಗಿತ್ತು. (ಕುಂದಾಪ್ರ ಡಾಟ್ ಕಾಂ)

ಬೆಳಿಗ್ಗೆ ಮದುವೆಗೆ ತಯಾರಾಗಿ ಸಭಾಭವನಕ್ಕೆ ಬಂದಿದ್ದ ವರನ ಕಡೆಯವರಿಗೆ ವಧು ನಾಪತ್ತೆಯಾಗಿರುವ ಬಗ್ಗೆ ತಿಳಿದು ದಿಕ್ಕುತೋಚದಂತಾಗಿದ್ದರು. ಮದುವೆಗೆ ಬಂದಿದ್ದ ಯುವತಿಯೋರ್ವಳು ಆತನನ್ನು ಮದುವೆಯಾಗುವುದಾಗಿ ತಿಳಿಸಿದ್ದಾಳೆ ಎನ್ನಲಾಗುತ್ತಿದೆ.

ಪ್ರಿಯಕರನೊಂದಿಗೆ ಮದುವೆ?
ಬೆಳಿಗ್ಗೆಯೇ ನಾಪತ್ತೆಯಾಗಿದ್ದ ಯುವತಿ ಗಂಗೊಳ್ಳಿಯ ತನ್ನ ಪ್ರಿಯಕರನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಈ ಮೊದಲೇ ಅವರು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ತಿಳಿದಿತ್ತು. ಅದನ್ನು ವಿರೋಧಿಸಿ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಹಾಗಾಗಿಯೇ ಮದುವೆಯ ಹಿಂದಿನ ದಿನದ ತನಕವೂ ಸುಮ್ಮನಿದ್ದ ಯುವತಿ, ಪ್ಲ್ಯಾನ್ ಮಾಡಿಯೇ ಪರಾರಿಯಾಗಿರಬಹುದು ಎನ್ನಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯ ಹುಡುಕಾಟದಲ್ಲಿದ್ದಾರೆ. (ಕುಂದಾಪ್ರ ಡಾಟ್ ಕಾಂ)

ಇದನ್ನೂ ಓದಿ:
► ಕುಂದಾಪುರ: ವರ ನಾಪತ್ತೆಯಾಗಿ ಮದುವೆ ರದ್ದು – https://kundapraa.com/?p=33940 .

Click here

Click here

Click here

Click Here

Call us

Call us

Leave a Reply