ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಅಂಚೆ ಕಚೇರಿ, ಜೆಸಿಐ ಬೈಂದೂರು ಸಿಟಿ ಹಾಗೂ ಜೆಸಿಐ ಶಿರೂರು ಇವರ ಸಹಯೋಗದೊಂದಿಗೆ ಆಧಾರ ಕಾರ್ಡ್ ನೊಂದಣಿ ಶಿಬಿರವು ಬೈಂದೂರು ಅಂಚೆ ಕಚೇರಿ ಇಲ್ಲಿ ಜರುಗಿತು.
ಕಾರ್ಯಕ್ರಮವನ್ನು ಜೆಸಿಐ ಬೈಂದೂರು ಸಿಟಿ ಅಧ್ಯಕ್ಷಮಣಿಕಂಠ ಎಸ್ ಉದ್ಘಾಟಿಸಿದರು. ಅಂಚೆ ಇಲಾಖೆಯ ಉಡುಪಿ ಅಧಿಕ್ಷಕರಾದ ಸುಧಾಕರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜೆಸಿ ಶಿರೂರು ಅಧ್ಯಕ್ಷ ನಾಗೇಶ್, ಬೈಂದೂರು ಜೆಸಿಯ ನಿಯೋಜಿತ ಅಧ್ಯಕ್ಷೆ ಜೆಸಿ ಪ್ರಿಯದರ್ಶಿನಿ ಬೆಸ್ಕೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೈಂದೂರು ಅಂಚೆ ಕಚೇರಿ ಮುಖ್ಯಸ್ಥೆ ರತ್ನಾ ಗೀರಿಶ್ ಸ್ವಾಗತಿಸಿದರು, ಜೆಸಿ ಗೀರಿಶ್ ಮೆಸ್ತಾ ಅವರು ವಂದಿಸಿದರು, ಜೆಸಿ ಪ್ರಕಾಶ್ ಅವರು ನಿರೂಪಿಸಿದರು.










