ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುಸ್ಥಿರ ಗ್ರಾಮದ ಪರಿಕಲ್ಪನೆಯಲ್ಲಿ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಿಗೆ ಸೋಲಾರ್ ಅಳವಡಿಸುವ ’ಸೋಲಾರ್ ಗ್ರಾಮ ಯೋಜನೆ’ಯಲ್ಲಿ ಗೋಳಿಹೊಳೆ ಗ್ರಾಮ ಪಂಚಾಯತ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೋಳಿಹೊಳೆ, ಸೆಲ್ಕೋ ಸೋಲಾರ್ ಲೈಟ್ಸ್ ಪ್ರೈ ಲಿ., ಕುಂದಾಪುರ ಶಾಖೆಯ ವತಿಯಿಂದ ಮೊದಲ ಹಂತವಾಗಿ ಗೋಳಿಹೊಳೆ ಮೂರ್‌ಕೈ ಎಂಬಲ್ಲಿ ಎಂಬಲ್ಲಿ ನಾಗರತ್ನ ಶೇಖರ ಪೂಜಾರಿ ಎನ್ನುವವರ ಅಂಗಡಿಗೆ ಸೋಲಾರ್ ಡಿಸಿ ಪ್ರಿಡ್ಜ್‌ನ್ನು ಅಳವಡಿಸಿದ್ದು ಇದನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಆರ್.ಎಂ.ರಮೇಶ ತುಂಗಾ ಉದ್ಘಾಟಿಸಿದರು.
ಸೆಲ್ಕೋದ ಜಿ.ಎಂ ಜಗದೀಶ ಪೈ, ಎ.ಜಿ.ಎಂ ಗುರುಪ್ರಕಾಶ್ ಶೆಟ್ಟಿ, ಸೀನಿಯರ್ ಮ್ಯಾನೇಜರ್ ಶೇಖರ ಶೆಟ್ಟಿ, ಸ್ಥಳೀಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮ್ಯಾನೇಜರ್ ಅರುಣ್ ಕುಮಾರ್ ಹಾಗೂ ಸೆಲ್ಕೋದ ಪ್ರತಿನಿಧಿಗಳಾದ ರವಿ, ಗೋಪಾಲ ನಾಯ್ಕ ಉಪಸ್ಥಿತರಿದ್ದರು.