ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಲ್ಲೂರಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ನಲ್ಲಿ ಡಿ.೯ರಂದು ವಿಷ ಕುಡಿದ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಅವರು ದಂಪತಿಗಳಲ್ಲ ಬದಲಿಗೆ ಈವರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳಿದ್ದರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ರಾಜಕುಮಾರ್ ಹಾಗೂ ಸಂಗೀತಾ ಇಬ್ಬರೂ ಕೂಡ ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದೇ ಊರಿನವರು. ಮೃತ ರಾಜಕುಮಾರ್‌ಗೆ ಮೂರು ಮಕ್ಕಳಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತಾಗೆ ಇಬ್ಬರು ಮಕ್ಕಳಿದ್ದಾರೆ.
ರಾಜಕುಮಾರ್ ಆದಿ ಉಡುಪಿಯಗೆ ಕೂಲಿ ಕೆಲಸಕ್ಕಾಗಿ ಬರುತ್ತಿದ್ದ. ಆತನ ಪತ್ನಿ ಮಕ್ಕಳು ಕೊಯಮತ್ತೂರಿನಲ್ಲಿಯೇ ವಾಸವಿದ್ದಾರೆ. ಸಂಗೀತಳ ಪತಿ ಕೂಡ ಅದೇ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕುಮಾರ್ ಮತ್ತು ಸಂಗೀತ ಇಬ್ಬರು ಪ್ರೇಮಿಗಳಾಗಿದ್ದು ಕೊಲ್ಲೂರಿಗೆ ಬರುವ ಮುನ್ನಾ ದಿನ ಊರು ಬಿಟ್ಟು ಇಲ್ಲಿಗೆ ಬಂದು ಬಸ್ಸಿನಲ್ಲಿ ವಿಷ ಸೇವಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಘಟನೆಯಲ್ಲಿ ರಾಜ್‌ಕುಮಾರ್ ಮೃತಪಟ್ಟಿದ್ದು, ಸಂಗೀತ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಾಜ್‌ಕುಮಾರ್ ಬಲವಂತದಿಂದ ವಿಷ ಕುಡಿಸಿರುವ ಶಂಕೆ ಇದ್ದು ಘಟನೆಯ ಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ:
► ಕುಂದಾಪುರ: ಚಲಿಸುವ ಬಸ್‌ಲ್ಲಿ ವಿಷ ಸೇವಿಸಿದ ದಂಪತಿ – https://kundapraa.com/?p=34762 .
► ಬಸ್ಸಿನಲ್ಲಿ ದಂಪತಿ, ಮಗು ವಿಷ ಸೇವಿಸಿದ ಪ್ರಕರಣ: ಪತಿ ಸಾವು – https://kundapraa.com/?p=34765 .