ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ರಜತ ಮಹೋತ್ಸವದ ಸಂಭ್ರಮದ 2ನೇ ದಿನ ಭಾನುವಾರ ಕಾರ್ಯಕ್ರಮದ ಅಂಗವಾಗಿ ಸ್ಮರನ ಸಂಚಿಕರ ಬಿಡುಗಡೆ ಮಾಜಿ ಅಧ್ಯಕ್ಷರಿಗೆ ಸನ್ಮಾನ, ಸಮಾರೋಪ ಸಮಾರಂಭ ಪ್ರತಿಭಾಪುರಸ್ಕಾರ, ವಿದ್ಯರ್ಥಿ ವೇತನ ವಿತರಣೆ ಕಾರ್ಯಕ್ರಮಗಳು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಿತು. ರಜತ ಮಹೋತ್ಸವದ ಸಂಬ್ರಮದ ನೆನಪಿಗಾಗಿ ಬೆಳ್ಳಿರಥ ಸ್ಮರಣ ಸಂಚಿಕೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೃಷ್ಣಾನಂದ ಚಾತ್ರ ಬಿಡುಗಡೆಗೊಳಿಸಿ ಮಾತನಾಡುತ್ತಾ ಉಡುಪಿ ಜಿಲ್ಲೆಯಲ್ಲಿ ಬ್ರಾಹ್ಮಣ ಸಂಘಟನೆಯು ಉತ್ತಮವಾಗಿದ್ದು ಹಾಗೆಯೆ ಉಪ್ಪುಂದ ವಲಯವು ಕಳೆದ ೨೫ ವರ್ಷಗಳಿಂದಲೂ ಉತ್ತಮವಾಗಿ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು. ಸಂಘಟನೆಗೆ ತನ್ನದೇ ವಿಶೇಷ ಕೊಡುಗೆ ನೀಡಿದ್ದು ಜಿಲ್ಲೆಯಲ್ಲಿಯೇ ಗೌರವಕ್ಕೆ ಪಾತ್ರವಾದ ವಲಯವಾಗಿರುತ್ತದೆ ಎಂದು ಹೇಳಿದರು.
ಈ ಸಂದಂರ್ಭದಲ್ಲಿ ವಲಯದ ಮಾಜಿ ಅಧ್ಯಕ್ಷರುಗಳಾದ ಯು. ರಮೇಶ್ ವೈದ್ಯ ಹಿರಿಯಣ್ಣ ರಾವ್, ದೀಟಿ ಸೀತಾರಾಮ ಮಯ್ಯ, ಬಿ. ಗಣೇಶ್ ಮಯ್ಯ, ಹೆಚ್. ರಾಜರಾಮ ಭಟ್, ಮಂಜುನಾಥ ಉಡುಪ, ಇವರುಗಳನ್ನು ಸನ್ಮಾನಿಸಲಾಯಿತು. ಕನ್ನಡ ಕೋಗಿಲೆಯ ಸೀಜನ್ ೧ರ ಪೈನಲಿಸ್ಟ್ ಕಲಾವಿದ ಕಂಬದಕೋಣೆ ಗಣೇಶ್ ಕಾರಂತರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು. ಹಾಗೆಯೇ ರಜತ ಸಂಬ್ರಮಕ್ಕೆ ಪೋಷಕರಾಗಿರುವ ಕೆ. ಉಮೇಶ್ ಶ್ಯಾನುಭಾಗ್, ಉಷಾಪ್ರಕಾಶ್ ಐತಾಳ್, ವಾಸುದೇವ ಐತಾಳ್, ರತ್ನಾಕರ ಉಡುಪ ದಂಪತಿ, ಪ್ರಭಾಕರ ಮೇರ್ಟ ಇವರುಗಳನ್ನು ಸನ್ಮಾನಿಸಲಾಯಿತು.
ಉಪ್ಪುಂದ ವಲಯಾಧ್ಯಕ್ಷ ಬಿ. ವಿಶ್ವೇಶ್ವರ ಅಡಿಗ ಸಮಾರಂಭದ ಅಧ್ಯಕ್ಷತೆವಹಿಸಿದ್ದರು ಮುಖ್ಯ ಅಥಿತಿಗಳಾಗಿ ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಸುಭಾಷಚಂದ್ರ ಪುರಾಣಿಕ್, ಕಿರಿಮಂಜೇಶ್ವರರ ಅಗಸ್ತೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಕೆ. ಉಮೇಶ್ ಶ್ಯಾನುಭಾಗ್, ಉದ್ಯಮಿ ವಾಸುದೇವ ಐತಾಳ್, ಶಿಕ್ಷಕಿ ಉಷಾ ಪ್ರಕಾಶ್ ಐತಾಳ್, ಉಡುಪಿ ಜಿಲ್ಲಾ ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಾ ಗಣೇಶ್ ರಾವ್ ವೇದಿಕೆಯಲ್ಲಿ ಉಸ್ಥಿತರಿದ್ದರು ಕಾಐದರ್ಶಿ ರತ್ನಾಕರ ಉಡುಪ ಸ್ವಾಗತಿಸಿದರು, ಹೇಮಾ ಹೊಳ್ಳ ಮತ್ತು ವೀಣಾ ಶ್ಯಾನುಭಾಗ್ ಪ್ರಾರ್ಥಿಸಿದರು, ಪದ್ಮನಾಭ ಹೆಬ್ಬಾರ್, ಶಿವರಾಮ ಮಧ್ಯಸ್ಥ, ಕಾರ್ಯಕ್ರಮ ನಿರೂಪಿಸಿದರು ಕೋಶಧ್ಯಕ್ಷ ಪ್ರಭಾಕರ ಮೇರ್ಟ ವಂದಿಸಿದರು.
ಸಮಾರೋಪ: ವಿಶ್ರಾಂತ ಉಪನ್ಯಾಸಕ ಕೋ ಶಿವಾನಂದ ಕಾರಂತ್ ಸಮಾರೋಪ ಭಾಷಣ ಮಾಡಿದರು ಮುಖ್ಯ ಅಥಿತಿಗಳಾಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಅಡಿಗ, ಮಾಜಿ ಅಧ್ಯಕ್ಷ ದೀಟಿ ಸೀತಾರಾಮ ಮಯ್ಯ, ಭಾರತಿ ಉಡುಪ, ವಲಯಾಧ್ಯಕ್ಷ ಮಂಜುನಾಥ ಅಡಿಗ, ಮಹಿಳಾ ವೇದಿಕೆ ಅಧ್ಯಕ್ಷೆ ಸುಮಂಗಳಾ ಕಾರಂತ್, ಕಾರ್ಯದರ್ಶಿ ರತ್ನಕರ ಉಡುಪ, ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ಮಯ್ಯ, ಕೋಶಾಧಿಕಾರಿ ಪ್ರಭಾಕರ ಮೇರ್ಟಾ ವೇದಿಕೆಯಲ್ಲಿ ಉಪಸ್ಥಿತರಿದರು. ಪಿಯುಸಿನಲ್ಲಿ ರಾಜ್ಯಕ್ಕೆ ೫ ನೇ ರ‍್ಯಾಂಕ್ ಗಳಿಸಿದ ರೋಹನ್ ರಾವ್ ಜೇ.ಹೆಚ್, ಎಸ್.ಎಸ್.ಎಲ್.ಸಿ ನಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಶ್ರೀನಿಧಿ ಉಡುಪ, ಅವರುಗಳನ್ನು ಸನ್ಮಾನಿಸಲಾಯಿತು ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಆರ್ಥಿಕವಾಗಿ ಹಿಂದುಳಿದ 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಿ. ವಿಶ್ವೇಶ್ವರ ಅಡಿಗ, ಸಮಾರಂಭದ ಅಧ್ಯಕ್ಷತೆ ವಹಿಸಿದರು ಕಾರ್ಯದರ್ಶಿ ರತ್ನಾಕರ ಉಡುಪ ಸ್ವಾಗತಿಸಿದರು. ಶಿವರಾಮ ಮದ್ಯಸ್ಥಾ ಕಾರ್ಯಕ್ರಮ ನಿರುಪಿಸಿದರು ನಂತರದಲ್ಲಿ . ಕನ್ನಡ ಕೋಗಿಲೆಯ ಸೀಜನ್ ೧ರ ಪೈನಲಿಸ್ಟ್ ಕಲಾವಿದ ಕಂಬದಕೋಣೆ ಗಣೇಶ್ ಕಾರಂತ ಬಳಗದಿಂದ ಸುಶ್ರಾವ್ಯ ಸಂಗೀತಾ ಕಾರ್ಯಕ್ರಮ ನೆಡೆಯಿತು.