ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಬೈಂದೂರು ರತ್ತೂಬಾಯಿ ಜನತಾ ಹೈಸ್ಕೂಲು ಹಾಗೂ ಬಿಜೂರು ಸರಕಾರಿ ಪ್ರೌಢಶಾಲೆಗೆ ಒಟ್ಟು 60,000ರೂ. ಮೌಲ್ಯದ ಎರಡು ಗ್ಯಾಸ್ ರೇಂಜ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಬೈಂದೂರು ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿ ಶಾಲೆಯ ಮುಖ್ಯೋಪಧ್ಯಾಯರಾದ ಮಂಜು ಕಾಳವಾರ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಟ್ರಸ್ಟಿ ರಾಮ ಬಿಜೂರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಬಿಜೂರು ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿ ಶಾಲಾ ಮುಖ್ಯೋಪಧ್ಯಾಯರಾದ ಸುಬ್ರಹ್ಮಣ್ಯ ಮದ್ದೋಡಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಟ್ರಸ್ಟೀ ರಾಮ ಬಿಜೂರು, ಎಸ್‌ಡಿಎಂಸಿ ಅಧ್ಯಕ್ಷ ರಾಜೇಂದ್ರ ಬಿಜೂರು, ಎಸ್‌ಡಿಎಂಸಿ ಸದಸ್ಯರುಗಳಾ ಸುರೇಶ್ ಬಿಜೂರು, ಉಮೇಶ್ ದೇವಾಡಿಗ, ತಿಮ್ಮಪ್ಪ ದೇವಾಡಿಗ ಹಾಗೂ ಇತರರರು ಉಪಸ್ಥಿತರಿದ್ದರು.