ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಚಾರಿ ಪೋಲೀಸ್ ಠಾಣೆ ಮತ್ತು ರೋಟರಿ ಕ್ಲಬ್ ಮಿಡ್‌ಟೌನ್ ಕುಂದಾಪುರ ಇವರ ಸಹಯೋಗದೊಂದಿಗೆ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷ್ಷತಾ ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು.
ಟ್ರಾಫಿಕ್ ಎಎಸ್‌ಐ ಪುಷ್ಪಾ ಅವರು ರಸ್ತೆ ಸಂಚಾರದ ವೇಳೆಯಲ್ಲಿ ಅನುಸರಿಸಬೇಕಾದ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಅವಶ್ಯಕ ಮಾಹಿತಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ವಲಯ 1 ರ ರೋಟರಿ ಸಹಾಯಕ ಗವರ್ನರ್ ರವಿರಾಜ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಮಿಡ್‌ಟೌನ್ ಕುಂದಾಪುರ ಇದರ ಅದ್ಯಕ್ಷರಾದ ಶಶಿಧರ ಶೆಟ್ಟಿ, ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ, ರಸ್ತೆ ಸುರಕ್ಷತಾ ವಿಭಾಗದ ನಿರ್ದೇಶಕರಾದ ನಿರಂಜನ್ ಶೆಟ್ಟಿ, ಕಾಲೇಜಿನ ಪ್ರಾಶುಪಾಲರಾದ ಗಣೇಶ ಮೊಗವೀರ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಕೃಷ್ಣ ಅಡಿಗ ಉಪಸ್ಥಿತರಿದ್ದರು.











