ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗಾಣಿಗ ಸಮಾಜ ಸೇವಾ ಸಂಘ, ತಗ್ಗರ್ಸೆ ಗ್ರಾಮ ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವು ಚಂದಣ ಶ್ರೀ ಸೋಮಲಿಂಗೇಶ್ವರ ದೇವಸ್ಥಾನ ಜರುಗಿತು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಮೇಶ ಗಾಣಿಗ ಕೊಲ್ಲೂರು ಇವರು ಉದ್ಘಾಟಿಸಿದರು. ನೂತನ ಅಧ್ಯಕ್ಷರಾದ ರಾಜು ಗಾಣಿಗ ಹುಳುವಾಡಿಯವರಿಗೆ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇದರ ಅಧ್ಯಕ್ಷರಾದ ಪ್ರಭಾಕರ ಗಾಣಿಗ ಕುಂಭಾಶಿ ಪದಗ್ರಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗರಾಜ್ ಗಾಣಿಗ ಬೈಂದೂರು, ಗಾಣಿಗ ಯುವ ಸಂಘಟನೆ, ಬೈಂದೂರು ವಲಯದ ಅಧ್ಯಕ್ಷರಾದ ಗಣೇಶ ಗಾಣಿಗ ಉಪ್ಪುಂದ, ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿ, ನಾಗರಾಜ್ ಹಾಲಂಬೇರು, ಗೌರವಾಧ್ಯಕ್ಷರಾದ ಗೋವಿಂದ ಗಾಣಿಗ ಹೆಗ್ಗೇರಿ, ಭಜನಾ ಮಂಡಳಿ ಅಧ್ಯಕ್ಷರಾದ ರಂಗ ಗಾಣಿಗ ಮತ್ತು ಸಮಾಜ ಬಾಂದವರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ವೀರಭದ್ರ ಗಾಣಿಗ ಹಾಲಂಬೇರು ಸ್ವಾಗತಿಸಿ, ತಗ್ಗರ್ಸೆ ತಿಮ್ಮಪ್ಪ ಗಾಣಿಗ ಮತ್ತು ನೂತನ ಖಜಾಂಚಿ ಗಣೇಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.