ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದೇವಾಡಿಗರ ಸಮಾಜ ಸೇವಾ ಸಂಘ ಕುಂದಾಪುರ ಇದರ ವತಿಯಿಂದ ಮಹಾಸಭೆ, ಪ್ರತಿಭಾ ಪುರಸ್ಕಾರ, ಸಾಮೂಹಿಕ ಗಣಹೋಮ, ಸತ್ಯನಾರಾಯಣ ಪೂಜೆ, ಸಮ್ಮಾನ ಕೋಣಿ ಗ್ರಾಮದ ಹುಣ್ಸೆಕಟ್ಟೆ ಸಮೀಪ ನಿರ್ಮಾಣವಾಗಲಿರುವ ದೇವಾಡಿಗರ ಸಂಘದ ಸಭಾಭವನದ ಸ್ಥಳದಲ್ಲಿ ನಡೆಯಿತು.
ಸಮಾರಂಭ ಉದ್ಘಾಟಿಸಿದ ಮುಂಬಯಿನ ಉದ್ಯಮಿ ಸುರೇಶ ಡಿ ಪಡುಕೋಣೆ ಮಾತನಾಡಿ, ಇಲ್ಲಿ ನಿರ್ಮಾಣವಾಗಲಿರುವ ಸಭಾಭವನವು ದೇವಾಡಿಗರ ಸಂಘಕ್ಕೆ ಬಹು ದೊಡ್ಡ ಕೊಡುಗೆಯಾಗಲಿದೆ. ಇದರ ನಿರ್ಮಾಣಕ್ಕೆ ಎಲ್ಲರೂ ಸಂಘಟಿತರಾಗಿ ಸಹಕರಿಸಿ ಎಂದರು.
ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರಗ್ರಾಹಕ ಸಂತೋಷ ಕುಂದೇಶ್ವರ, ಬಿಎಸ್ಸಿ ಪದವಿಯಲ್ಲಿ ಮಂಗಳೂರು ವಿವಿ ಮಟ್ಟದ ರ‍್ಯಾಂಕ್ ವಿಜೇತೆ ಸಹನಾ, ಯಕ್ಷಗಾನ ಭಾಗವತ ರವಿ ಸೂರಾಲು, ಮಾತೃಶ್ರೀ ಟುಟ್ಯೋರಿಯಲ್ ಕುಂದಾಪುರದ ವಾಸುದೇವ ಬೈಂದೂರು ಅವರನ್ನು ಸನ್ಮಾನಿಸಲಾಯಿತು.
ಬಾರ್ಕೂರು ಶ್ರೀ ಏಕಾನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಣ್ಣಯ್ಯ ಸೇರಿಗಾರ, ಉಪಾಧ್ಯಕ್ಷ ಜನಾರ್ಧನ ದೇವಾಡಿಗ, ತಾಲೂಕು ಪಣಚಾಯತ್ ಸದಸ್ಯ ರಾಜು ದೇವಾಡಿಗ, ಬೆಂಗಳೂರಿನ ಉದ್ಯಮಿ ರಮೇಶ ದೇವಾಡಿಗ ವಂಡ್ಸೆ, ಮಂಗಳೂರಿನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕುಸುಮ ಎಚ್. ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಂ ಚಂದ್ರಶೇಖರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ ಹೇರಿಕೇರಿ ಮತ್ತಿತರರು ಉಪಸ್ಥಿರಿದ್ದರು.
ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಪ್ರಸ್ತಾವಿಸಿ, ಮಾಜಿ ಅದ್ಯಕ್ಷ ದಿನೇಶ ದೇವಾಡಿಗ ವಂದಿಸಿದರು. ಶಿಕ್ಷಕ ರಾಘವೇಂದ್ರ ದೇವಾಡಿಗ ಪರಿಚಯಿಸಿದರು. ಶಿಕ್ಷಕ ರಾಮ ದೇವಾಡಿಗ ಹಾಗೂ ಸುಧಾಕರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.