ಬೆಂಗಳೂರು ಅಂ.ರಾ.ಚಲನಚಿತ್ರೋತ್ಸವಕ್ಕೆ ಸುಗಂಧಿ ಚಲನಚಿತ್ರ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನೆನಪು ಮೂವೀಸ್ ಕೋಟ ಅವರ ಸುಗಂಧಿ ಚಲನಚಿತ್ರ ವಿಶೇಷ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ.ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಜಿ.ಮೂರ್ತಿ ಅವರು ನಿರ್ದೇಶಿಸಿ,ಸಾಹಿತಿ ನರೇಂದ್ರ ಕುಮಾರ್ ನಿರ್ಮಾಪಕರಾಗಿರುವ ಚಿತ್ರಕ್ಕೆ ಪ್ರವೀಣ್ ಗೋಡ್ಖಿಂಡಿ ಸಂಗೀತವಿದ್ದು,ಪಿ.ಕೆ ದಾಸ್ ಕ್ಯಾಮರಾ ಕೈಚಳಕ ಮತ್ತು ಸಂಜೀವ ರೆಡ್ಡಿ ಸಂಕಲನ ಕೆಲಸ ನಿರ್ವಹಿಸಿದ್ದಾರೆ.ರವಿ ಪೂಜಾರಿ ಮತ್ತು ಖಾನ್ ಸಂಗೀತ ಮತ್ತು ನರೇಂದ್ರ ಕುಮಾರ್ ಮತ್ತು ಸತೀಶ್ ವಡ್ಡರ್ಸೆ ಅವರ ಸಂಭಾಷಣೆವಿದೆ.ಈ ಚಿತ್ರದಲ್ಲಿ ಮಗುವಿನ ಪಾತ್ರದಲ್ಲಿ ಸಾಸ್ತಾನದ ವೈಷ್ಣವಿ ಅಡಿಗ ಕಾಣಿಸಿಕೊಂಡಿದ್ದು,ತಾಯಿಯ ಪಾತ್ರದಲ್ಲಿ ವಿನಯ ಪ್ರಸಾದ್ ,ಗುರುವಿನ ಪಾತ್ರದಲ್ಲಿ ಬನ್ನಂಜೆ ಸಂಜೀವ್ ಸುವರ್ಣ ಅವರು ಅಭಿನಯಿಸಿದ್ದಾರೆ,ಅಲ್ಲದೇ ಕೋಟ ಪರಿಸರದ ೫೦ ಕ್ಕೂ ಹೆಚ್ಚು ಕಲಾವಿದರು ಈ ಚಲನಚಿತ್ರದಲ್ಲಿ ನಟಿಸಿದ್ದು ಪ್ರಮುಖರಾದ ಅಂಬಲಪಾಡಿಯ ಡಾ.ವಿಜಯ್ ಬಲ್ಲಾಳ್,ಕೋಟದ ಉದ್ಯಮಿ ಆನಂದ್ ಸಿ ಕುಂದರ್, ನೀಲಾವರ ಸುರೇಂದ್ರ ಅಡಿಗ ಸಹ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಕುಂದರ್, ಸಹ ನಿರ್ಮಾಪಕರಾಗಿ ಪ್ರಕಾಶ್ ಪೂಜಾರಿ, ಮಾಧವ ಪೂಜಾರಿ, ಕಲ್ಪನಾ ಭಾಸ್ಕರ್, ಬಸವ ಪೂಜಾರಿ, ರಾಜಶೇಖರ್ ಕೋಟ, ರಾಘವೇಂದ್ರ ರಾಜ್, ಸುಬ್ರಾಯ ಆಚಾರಿ, ಅಲೆನ್ ರೋಹನ್‌ವಾಜ್, ಸುಬ್ರಹ್ಮಣ್ಯ ಶೆಟ್ಟಿ, ಬಾಲಕೃಷ್ಣ ಕೊಡವೂರು ಸಹಕರಿಸಿದ್ದಾರೆ.

Call us

Click Here

ಮಗುವೊಂದು ಯಕ್ಷಗಾನ ಕಲಿಯಲು ಹೋಗುವಂತಹ ಸಂದರ್ಭ ಅವಳ ಜೀವನದಲ್ಲಿ ಉಂಟಾಗುವ ಅಡೆತಡೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಸುಗಂಧಿ ಸಿನಿಮಾದಲ್ಲಿ ಮಾಡಲಾಗಿದೆ.ಕಾರಂತರು ಯಕ್ಷಗಾನ ಕಲೆಯನ್ನು ಜೀವಂತವಾಗಿಸಿದ್ದಾರೆ ಎನ್ನುವ ಹಿನ್ನಲೆ ಇಟ್ಟುಕೊಂಡು ಈ ಚಲನಚಿತ್ರ ರೂಪಿಸಲಾಗಿದೆ.ಹಿಂದುಳಿದ ವರ್ಗದ ಮಗುವೊಂದು ಯಕ್ಷಗಾನ ಕಲಿಯಲು ಪಡುವಂತಹ ಪಾಡು ಮತ್ತು ಕಾರಂತರನ್ನು ಆದರ್ಶವನ್ನಾಗಿ ಜೀವನದಲ್ಲಿ ಅಳವಡಿಸಿಕೊಂಡು ಮಗು ಯಕ್ಷಗಾನದಲ್ಲಿ ಹೇಗೆ ಸಾಧನೆ ಮಾಡುತ್ತದೆ ಎನ್ನುವ ಬಗ್ಗೆ ಕಥೆ ಚೆಲ್ಲುತ್ತದೆ.

ತಮ್ಮ ಸಂಸ್ಥೆ ನೆನಪು ಮೂವೀಸ್ ಕೋಟ ಇದರ ಮೊದಲ ಪ್ರಯತ್ನದಲ್ಲಿಯೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿರುವುದಕ್ಕೆ ನಿರ್ಮಾಪಕ ನರೇಂದ್ರ ಕುಮಾರ್ ಕೋಟ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply