ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮೊದಲು ನಿಮ್ಮ ಬಗ್ಗೆ ನಂಬಿಕೆ ಇಡಬೇಕು. ಜೀವನದಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ವಿಂಗ್ ಎನ್.ಎಸ್.ಎಸ್ ಮತ್ತು ರುಡಸೆಟ್ ಬ್ರಹ್ಮಾವರ ಮತ್ತು ಆಸರೆ ಸಂಸ್ಥೆ ಇವರ ಸಹಯೋಗದಲ್ಲಿ ನಡೆದ ಮಾಹಿತಿ ಕಾಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಸಕಾರಾತ್ಮಕ ಆಲೋಚನೆಗಳಿದ್ದಾಗ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸ್ಪರ್ಧೆ ಇದ್ದಾಗ ಮತ್ತಷ್ಟು ಪರಸ್ಪರರ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಆಗ ಸ್ಪರ್ಧೆಯ ಮಟ್ಟವನ್ನು ಅರ್ಥ ಮಾಡಿಕೊಳಳಬೇಕು. ಅಲ್ಲದೇ ಸೇವೆಗೆ ಸೇರಿದ ಮೇಲೆ ಇನ್ನ್ನ್ಷ್ಟು ಸ್ಪರ್ಧೆ ಎದುರಾಗುತ್ತದೆ. ಜೊತೆಗೆ ಜನಸಾಮಾನ್ಯರ ಮಟ್ಟಕ್ಕೆ ನಮ್ಮ ಸೇವೆ ತಲುಪಬೇಕು ಎನ್ನುವುದುಆಶಯವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ರುಡಸೆಟ್ ಬ್ರಹ್ಮಾವರ ಇದರ ಪ್ರಾಂಶುಪಾಲ ಕರುಣಾಕರ ಜೈನ್ ಸ್ವ-ಉದ್ಯೋಗದ ಕುರಿತು ಉದಾಹರಣೆ ಸಹಿತ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಂದಾಪುರ ತಾಲೂಕಾ ಉಪವಿಬಾಗಾಧಿಕಾರಿ ಕೆ.ರಾಜು, ತಹಶೀಲ್ದಾರ್ ತಿಪ್ಪೆಸ್ವಾಮಿ, ಆಸರೆ ಸಂಸ್ಥೆಯ ಡಾ.ಕೀರ್ತಿ ಪಾಲನ್, ಯುಥ್ ರೆಡ್ ಕ್ರಾಸ್ ವಿಂಗ್ ಇದರ ಅಧಿಕಾರಿಗಳಾದ ಪ್ರೊ.ಸತ್ಯನಾರಾಯಣ, ಎನ್.ಎಸ್.ಎಸ್ ಅಧಿಕಾರಿಗಳಾದ ಅರುನ ಎಸ್, ಮತ್ತು ರಾಮಚಂದ್ರ ಆಚಾರ್ಯ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು.