ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಮೂರನೆಯ ವಾರ್ಷಿಕೋತ್ಸವ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕೇಂದ್ರದ ಉದ್ಘಾಟನಾ ಸಮಾರಂಭ ಮಾರ್ಚ್ ಒಂದು, ರವಿವಾರ ಜರುಗಿತು. ಉದ್ಘಾಟಕರಾಗಿ ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷರಾದ ಡಾ. ಕಿಶೋರಕುಮಾರ ಶೆಟ್ಟಿ ಆಗಮಿಸಿ ಶುಭಾಶಯ ಕೋರಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಬೈಂದೂರು ಶಾಖೆಯ ಪ್ರಬಂಧಕರಾದ ಪರಮೇಶ್ವರ ಪೂಜಾರಿ, ವಿಶ್ರಾಂತ ಉಪನ್ಯಾಸಕರಾದ ಪಿ. ಶೇಷಪ್ಪಯ್ಯ ಹೆಬ್ಬಾರ್, ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಅನಿಲ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಎಚ್, ಪ್ರಾಂಶುಪಾಲರಾದ ಸಂಧ್ಯಾ ಭಟ್ ಭಾಗವಹಿಸಿದ್ದರು. ವಾಗ್ಜೋತಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಮುಖ್ಯ ಶಿಕ್ಷಕರಾದ ರವೀಂದ್ರ ಎಚ್ ಅವರನ್ನು ಸನ್ಮಾನಿಸಲಾಯಿತು. ಸಂವೇದನಾ ಕಾಲೇಜಿನ ಅಧ್ಯಕ್ಷರಾದ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಅಶ್ವಿನಿ ಆರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವಿನಯಾ ವರದಿ ವಾಚಿಸಿದರು. ಸಂಧ್ಯಾ ಭಟ್ ಸ್ವಾಗತಿಸಿ, ಉಪನ್ಯಾಸಕಿ ದಿವ್ಯಾ ವಂದಿಸಿದರು.