ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬಿಜೂರು ಮೂರ‍್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದ ವಾರ್ಷಿಕ ಭಜನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ರವಿವಾರ ನಡೆಯಿತು.
ಬಿಜೂರು ಪ್ರಮೋದ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಪೂಜೆ ಕಾರ್ಯ ನೆರವೇರಿತು.
ಪುರಾಣ ಪ್ರಸಿದ್ಧ ಶ್ರೀ ನಂದಿಕೇಶ್ವರ ದೈವಸ್ಥಾನದ ವಾರ್ಷಿಕೋತ್ಸವ, ಏಕಾಹ ಅಖಂಡ ಭಜನೆ ಹಾಗೂ ಗೆಂಡ ಸೇವೆ ಕಾರ್ಯಕ್ರಮಗಳು ಎ.14ರಿಂದ 16ರ ವರೆಗೆ ನಡೆಯಲಿದೆ.
ಎ.14ರಂದು ವೇದಮೂರ್ತಿ ಮಹಾಬಲ ಭಟ್ ಸಹಭಾಗಿತ್ವದಲ್ಲಿ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಎ.15ರಂದು ಬೆಳಗ್ಗೆ ಗಂಟೆ 9.15ಕ್ಕೆ ಏಕಾಹ ಅಖಂಡ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ಎ.16ರಂದು 11.15ಕ್ಕೆ ಪ್ರದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ.
ಎ.15ರಂದು ರಾತ್ರಿ 8ಗಂಟೆಗೆ ಹಿಂದೂಸ್ತಾನಿಯ ಯುವ ಗಾಯಕ ರಜತ್ ಕುಲಕರ್ಣಿ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದ್ದು, ಎ.16ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರು ಯಕ್ಷಾರಾಧನ ಕಲಾ ಕೇಂದ್ರದ ಸುಂಗಲಾ ರತ್ನಾಕರ ರಾವ್ ಮತ್ತು ಮಹಿಳಾ ಯಕ್ಷಗಾನ ತಂಡ ಇವರಿಂದ ದಕ್ಷಾಧ್ವರ ಗಿರಿಜಾ ಕಲ್ಯಾಣ ಯಕ್ಷಗಾನ ನಡೆಯಲಿದ್ದು, ರಾತ್ರಿ 8ಗಂಟೆಗೆ ಕೆಂಡ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿರುವುದು. ಮೂರು ದಿನದ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಕೃಷ್ಣಮೂರ್ತಿ ದೇವಾಡಿಗ ಮತ್ತು ಸಮಿತಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.