ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ಇವರು ಧಾರವಾಡದಲ್ಲಿ ನಡೆಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗುಜ್ಜಾಡಿ ಗ್ರಾಮದ ಕಂಚುಗೋಡು, ನಿವಾಸಿ ಶಿಕ್ಷಕ ನಾಗರಾಜ ಖಾರ್ವಿ 50ಮೀ ಬ್ರೆಷ್ಟ್ ಸ್ಟ್ರೋಕ್ ಚಿನ್ನ, 100ಮೀ ಬ್ರೆಷ್ಟ್ ಸ್ಟ್ರೋಕ್ ಚಿನ್ನ, 200ಮೀ ಬ್ರೆಷ್ಟ್ ಸ್ಟ್ರೋಕ್ ಬೆಳ್ಳಿ, 4×100 ಮೆಡ್ಲೆ ರಿಲೇಯಲ್ಲಿ ಬೆಳ್ಳಿ, 4×100 ಫ್ರೀ ಸ್ಟೈಲ್ ರಿಲೇ ಬೆಳ್ಳಿ ಪಡೆದಿರುತ್ತಾರೆ.
ಇವರು ಸರಸ್ವತಿ ವಿದ್ಯಾಲಯ ಗಂಗೊಳ್ಳಿ, ಸರಕಾರಿ ಪ್ರಾಥಮಿಕ ಶಾಲೆ ಗುಜ್ಜಾಡಿ ಮತ್ತು ಕಂಚುಗೋಡಿನ ಹಳೆವಿದ್ಯಾರ್ಥಿ..
ಇವರಿಗೆ ರೇಷ್ಮೆ ಇಲಾಖೆಯ ನಿರೀಕ್ಷಕರಾದ ಬಿ.ಕೆ.ನಾಯ್ಕ್ , ಶಿವಾನಂದ ಗಟ್ಟಿ, ಲೋಕರಾಜ್ ವಿಟ್ಲ ತರಬೇತಿ ನೀಡಿರುತ್ತಾರೆ.