ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಉಡುಪಿ ರಾಮಕ್ಷತ್ರಿಯ ಯುವ ಸಂಫದ ಶತ ಕಾರ್ಯಕ್ರಮ ಸಂಭ್ರಮ ಸಾಂಸ್ಕ್ರತಿಕ ವೈಭವ 2020 ಪ್ರಯುಕ್ತ ಉಡುಪಿ ಪುರಭವನದಲ್ಲಿ ಏರ್ಪಡಿಸಿದ ರಾಮಕ್ಷತ್ರಿಯರ ಸಂಸ್ಕ್ರತಿ ಸಂಪ್ರದಾಯ ಬಿಂಬಿಸುವ ರಾಜ್ಯ ಮಟ್ಟದ ಕಿರುನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ರಾಮಕ್ಷತ್ರಿಯರು ಅಭಿನಯಿಸಿದ ನಮ್ಮವರ ಸಂಸ್ಕ್ರತಿ ಪ್ರಥಮ ಸ್ಥಾನ ಪಡೆದು ಶಾಶ್ವತ ಫಲಕ ನಗದು ಬಹುಮಾನ ವಿಜೇತರಾದರು. ನಾಟಕವನ್ನು ನೀನಾಸಂ ಪದವೀಧರ ಶಿಕ್ಷಕ ಗಣಪತಿ ಹೋಬಳಿದಾರ್ ನಿರ್ದೇಶಿಸಿದರು, ಕಲಾವಿದರಾಗಿ ಜಿ ತಿಮ್ಮಪ್ಪಯ್ಯ, ಮಾತೃ ಮಂಡಳಿಯ ಅಧ್ಯಕ್ಷರಾದ ವನಜಾ ಭಾಸ್ಕರ್, ಗಾಯತ್ರಿ ರಾಮ ಸೋಡಿತಾರ್, ಸಾವಿತ್ರಿ ಹನುಮಂತ, ಆಶಾ ದಿನೇಶ್, ಸ್ವಾತಿ ಸತೀಶ ಹೋಬಳಿದಾರ್, ಸುಮಲತಾ ಶ್ರೀಧರ ವಸ್ರೆ, ರಮ್ಯ ಮಹಾಬಲ ಹೋಬಳಿದಾರ್, ಅಮ್ರತಾ ಎನ್, ಅಕ್ಷರಾ ಪಟವಾಲ್ ಅಭಿನಯಿಸಿದರು. ರಂಗ ತಾಲೀಮಿಗೆ ರಾಮಕ್ಷತ್ರಿಯ ಸಮಾಜ ಬೈಂದೂರಿನ ಅಧ್ಯಕ್ಷರಾದ ಪರಮೇಶ್ವರ ಹೋಬಳಿದಾರ್, ಯುವಕ ಸಮಾಜದ ಅಧ್ಯಕ್ಷರಾದ ಗುರುರಾಜ ಹೋಬಳಿದಾರ್, ವಸಂತಿ ನಾರಾಯಣ ಮದ್ದೋಡಿ ಸಹಕರಿಸಿದರು ರಂಗಸಜ್ಜಿಕೆಯನ್ನು ಶ್ರೀಧರ ಎಂ. ಪಿ , ಸುಧಾಕರ ಪಿ, ಜ್ಯೋತಿ ಹೋಬಳಿದಾರ್ ಹಾಗೂ ಸೀತಾ ದಿನಕರ ಪಟ್ಟಾಲ್ ನಿರ್ವಹಿಸಿದರು ನಾಟಕ ವಿಷಯಕ್ಕೆ ಆಕರ ಗ್ರಂಥವಾಗಿ ಡಾ ಕೆ ಜಿ ವೆಂಕಟೇಶರ ಕರ್ನಾಟಕದಲ್ಲಿ ರಾಮಕ್ಷತ್ರಿಯರು, ಕುಂದಾಪುರ ಯುವಕ ಸಮಾಜ ಪ್ರಕಟಿಸಿದ ಸುವರ್ಣ ಸಂಭ್ರಮ ಮತ್ತು ಡಾ ಡಿ ಆರ್ ಪಾಂಡುರಂಗರ ಕೋಟೆಯವರ ಪುಸ್ತಕಗಳನ್ನು ಬಳಸಿಕೊಳ್ಳಲಾಯಿತು. ಕುಂದಾಪುರ ಅಧ್ಯಯನ ಕೇಂದ್ರ ಹಾಗೂ ಬಿಂದುಸಿರಿ ಟ್ರಸ್ಟ್ ನ ಪುರಾತನ ವಸ್ತುಗಳನ್ನು ಬಳಸಲಾಯಿತು.