ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯಲ್ಲಿ ಪರಿವಾರ ಶಕ್ತಿಗಳ ನೂತನ ಶಿಲಾಮಯ ದೇಗುಲ ಸಮರ್ಪಣೆ – ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಕ್ರಮಗಳು ಎಪ್ರಿಲ್ 5ರಿಂದ 13ರ ತನಕ ಜರುಗಲಿದ್ದು, ಪೂರ್ವಭಾವಿಯಾಗಿ, ಚಪ್ಪರ ಮುಹೂರ್ತ ಕಾರ್ಯಕ್ರಮ ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ರಘುರಾಮ ಶೆಟ್ಟಿ ಬಿಜೂರು, ಮದನಕುಮಾರ್ ಉಪ್ಪುಂದ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶಿರೂರು ಬಿಲ್ಲವ ಸಂಘದ ಅಧ್ಯಕ್ಷ ಚಿಕ್ಕು ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಸಸಿಹಿತ್ಲು, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ನಾಗರಾಜ ಶೆಟ್ಟಿ, ಆನಂದ ಶೆಟ್ಟಿ ನಾಕಟ್ಟೆ, ನಾಗರಾಜ ಗಾಣಿಗ ಬಂಕೇಶ್ವರ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು, ಮಂಜಯ್ಯ ಪೂಜಾರಿ ಏಳಜಿತ, ರಘುರಾಮ ಪೂಜಾರಿ ಶಿರೂರು, ಶೇಖರ ಪೂಜಾರಿ ಉಪ್ಪುಂದ, ಮುತ್ತಯ್ಯ ಪೂಜಾರಿ, ಅಣ್ಣಪ್ಪ ಪೂಜಾರಿ ಯಡ್ತರೆ, ಮೊದಲಾದವರು ಇದ್ದರು.