ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಧಾರವಾಡದ ಉದ್ಯಮಿ ಯು. ಬಿ. ಶೆಟ್ಟಿಯವರು ತಮ್ಮ ಯುಬಿಎಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ ಇಲಾಖೆಯ ಮೌಖಿಕ ಆದೇಶದೊಂದಿಗೆ ಶಾಲೆಯನ್ನು ಗುರುವಾರ ದತ್ತು ಸ್ವೀಕರಿಸಿದರು.
ಶಾಲಾ ದತ್ತು ಸ್ವೀಕಾರ ಹಾಗೂ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ, ಸರ್ಕಾರಿ ಶಾಲೆಗಳು ಮುನ್ನೆಲೆಯಲ್ಲಿ ಗುರುತಿಸಿಕೊಳ್ಳಬೇಕಾದರೆ ಖಾಸಗಿ ಸಹಭಾಗಿತ್ವ ಅಗತ್ಯವಾಗಿದ್ದು, ಯು.ಬಿ. ಶೆಟ್ಟಿ ಅಂತಹ ದಾನಿಗಳು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಪ್ರತಿ ಊರಿನಲ್ಲಿ ದೇವಾಲಯಗಳಿರುವಂತೆಯೇ ಅಲ್ಲಿನ ಶಾಲೆಗಳು ಕೂಡಾ ಸುಸ್ಥಿತಿಯಲ್ಲಿದ್ದರೇ ಮಾತ್ರ ಆ ಊರಿಗೆ ಮನ್ನಣೆ ಲಭಿಸುತ್ತದೆ ಎಂದರು.
ಬೈಂದೂರು ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಅಶೋಕಕುಮಾರ ಬಾಡ ಕಾರ್ಯಕ್ರಮ ಉದ್ಘಾಟಿಸಿ ಶುಭಸಂಶನೆಗೈದರು.
ತಾ.ಪಂ. ಸದಸ್ಯೆ ಮಾಲಿನಿ, ಕೆ, ಮಾಜಿ ತಾ.ಪಂ. ಸದಸ್ಯ ದೀಪಕ್‌ಕುಮಾರ ಶೆಟ್ಟಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಜನಾರ್ದನ, ಗ್ರಾ.ಪಂ. ಸದಸ್ಯರಾದ ಮಹಾಬಲ ದೇವಾಡಿಗ, ಸರೋಜ, ಶಂಕರ ಸೇರುಗಾರ್, ಜ್ಯೋತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ, ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ಬಾಲಯ್ಯ ಸೇರುಗಾರ್ ಸ್ವಾಗತಿಸಿದರು. ಶಿಕ್ಷಕರಾದ ಭಾಸ್ಕರ ನಿರೂಪಿ, ಆಶಾ ವಂದಿಸಿದರು.