ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: 2019-20 ನೇ ಸಾಲಿನ ಸ್ವಯಂ ಉದ್ಯೋಗ, ಸಮೃದ್ಧಿ, ಉನ್ನತಿ, ಐರಾವತ, ಪ್ರೇರಣಾ, ಸ್ಪೂರ್ತಿ, ಭೂ ಒಡೆತನ, ಗಂಗಾ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ, ಅರ್ಹ ಸಫಾಯಿ ಕರ್ಮಚಾರಿ / ಮ್ಯಾನುವಲ್ ಸ್ಕಾವೆಂಜರ‍್ಸ್ ಹಾಗೂ ಅವರ ಅವಲಂಬಿತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳವರು ನಿಗಮದ ವೆಬ್‌ಸೈಟ್ www.ksskdc.kar.nic.in ಮುಖಪುಟ ಮೆನುವಿನಲ್ಲಿ ಆನ್‌ಲೈನ್ ಮೂಲಕ ಏಪ್ರಿಲ್ ೩೦ ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.