ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಬೆಂಗಳೂರು ಇವರ ಮಾರ್ಚ್ 19 ರ ಸುತ್ತೋಲೆಯಂತೆ, ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಜರುಗಿಸುವ ಸಂಬಂಧ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಜನದಟ್ಟಣೆಯನ್ನು ನಿರ್ಭಂಧಿಸಲು, ಉಡುಪಿ ಜಿಲ್ಲೆಯ ಸಾರಿಗೆ ಕಛೇರಿಯಲ್ಲಿ ಮಾರ್ಚ್ 20 ರಿಂದ ಮುಂದಿನ ಆದೇಶದವರೆಗೆ ಹೊಸದಾಗಿ ಕಲಿಕಾ ಲೈಸನ್ಸ್ ಮತ್ತು ಚಾಲನಾ ಲೈಸನ್ಸ್‌ಗಳಿಗಾಗಿ ಪರೀಕ್ಷೆಗೆ ಹಾಜರಾಗುವುದನ್ನು ಕಡ್ಡಾಯವಾಗಿ ನಿರ್ಭಂಧಿಸಲಾಗಿದೆ.
ಏಪ್ರಿಲ್ 15 ರ ವರೆಗೆ ಸಿಂಧುತ್ವ ಹೊಂದಿರುವ ಕಲಿಕಾ ಲೈಸನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಹೊಸ ಚಾಲನಾ ಅನುಜ್ಞಾ ಪತ್ರ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ. ರಾಮಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.