ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಜಾತ್ಯತೀತ ಜನತಾ ಪಕ್ಷದ ಧುರೀಣ ಮರವಂತೆಯ ಮನ್ಸೂರ್ ಇಬ್ರಾಹಿಂ ಮತ್ತು ಅವರ ಸಹೋದರರು ಲಾಕ್‌ಡೌನ್‌ನಿಂದ ಬಾಧಿತರಾದ ಸುಮಾರು 250 ಕುಟುಂಬಗಳಿಗೆ ಕೆಲವು ದಿನಗಳಿಗಾಗುವ ದವಸ, ಧಾನ್ಯ ಮತ್ತು ಅಡುಗೆ ಸಾಮಗ್ರಿಗಳಿರುವ ಕಿಟ್‌ಗಳನ್ನು ವಿತರಿಸಿದರು.
ಅದರ ಭಾಗವಾಗಿ ಅಲ್ಲಿನ ೨೪ ರಿಕ್ಷಾ ಚಾಲಕರಿಗೆ ಶನಿವಾರ ಕಿಟ್ ಹಸ್ತಾಂತರಿಸುವ ಮೂಲಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ವಿತರಣೆಗೆ ಚಾಲನೆ ನೀಡಿ ಮನ್ಸೂರ್ ಕುಟುಂಬದ ಮಾನವೀಯ ಔದಾರ್ಯವನ್ನು ಶ್ಲಾಘಿಸಿದರು.
ಊರಿನ ಆಶಾ ಕಾರ್ಯಕರ್ತರಿಗೆ ಹಾಗೂ ಆಯ್ದ ಬಡ ಕುಟುಂಬಗಳ ಮನೆಗೆ ತೆರಳಿ ಮನ್ಸೂರ್ ಸಹೋದರರು ಕಿಟ್‌ಗಳನ್ನು ನೀಡಿದರು.










