ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೋನಾ ತಡೆಗಟ್ಟಲು ಅವಿರತವಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಪ್ರೋತ್ಸಾಹಧನ ನೀಡಿ, ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷರಾದ ಮಂಜಯ್ಯ ಶೆಟ್ಟಿ, ಉಪಾಧ್ಯಕ್ಷರಾದ ಎನ್. ಸಂತೋಷ ಕುಮಾರ್ ಶೆಟ್ಟಿ ನಿರ್ದೇಶರುಗಳಾದ ಚಂದ್ರಶೇಖರ ಶೆಟ್ಟಿ, ರತ್ನಾಕರ ಆಚಾರ್ಯ, ಗಂಗಾಧರ ಆಚಾರ್ಯ, ಸುಬ್ಬ ಪೂಜಾರಿ, ಎಚ್. ಶಂಕರ ಶೆಟ್ಟಿ, ಹರೀಶ್, ಲಲಿತಾ ಕುಲಾಲ್, ಅಕ್ಕಣಿ ಪೂಜಾರ‍್ತಿ, ಅಮರನಾಥ ಶೆಟ್ಟಿ, ಸುರೇಂದ್ರ, ರಾಜೇಶ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಯಡ್ತರೆ, ವ್ಯವಸ್ಥಾಪಕರಾದ ಸಂಜೀವ ಪೂಜಾರಿ ಇದ್ದರು.