ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ (92) ಮಂಗಳವಾರ ಮಧ್ಯಾಹ್ನ ಚರ್ಚ್ ರಸ್ತೆಯ ಸ್ವಗೃಹದಲ್ಲಿ ನಿಧನರಾದರು.
ವಿನ್ನಿಫ್ರೆಡ್ ಫರ್ನಾಂಡೀಸ್ ಅವರು ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ರಂಗ ಪ್ರವೇಶಿಸಿ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಎರಡು ಬಾರಿ ಕುಂದಾಪುರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ವಿಧಾನಪರಿಷತ್ ಸದಸ್ಯೆಯಾಗಿಯೂ ಆಗಿದ್ದರು.
ಮೃತರು ಮೂವರು ಪುತ್ತಿಯರು ಮತ್ತು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.