ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಂಗಮ್‌ನ ಬಳಿ ಅಪರಿಚಿತ ವ್ಯಕ್ತಿಯೋರ್ವ ವಿಪರೀತ ಮದ್ಯ ಸೇವಿಸಿ ಮೃತಪಟ್ಟಿರುವುದು ವರದಿಯಾಗಿದೆ.
ಸಂಗಮ್ ರಸ್ತೆಯ ಪಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ಸುಮಾರು ೩೫ ರಿಂದ ೪೦ ವರ್ಷದ ಗಂಡಸಿನ ಮೃತದೇಹ ಕಂಡುಬಂದಿದ್ದು, ವ್ಯಕ್ತಿಯು ವಿಪರೀತ ಮದ್ಯ ಸೇವನೆ ಮಾಡಿ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.