ಬೈಂದೂರು: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಡ್ತರೆ ಜಂಕ್ಷನ್ ಬಳಿ ಬುಧವಾರ ಸಂಜೆಯ ಹೊತ್ತಿಗೆ ನಡೆದಿದೆ. ಯಡ್ತರೆ ಬಾಳೆಹಿತ್ಲು ನಿವಾಸಿ ಬಾಬು ದೇವಾಡಿಗರ ಪುತ್ರ ದಿಲೀಪ್ ಕುಮಾರ್ (24) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Call us

Click Here

ಬಾಬು ದೇವಾಡಿಗ ಹಾಗೂ ಅವರ ಪುತ್ರ ದಿಲೀಪ್ ಕುಮಾರ್ ತಮ್ಮ ಹೋಟೆಲ್‌ನಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಆಪಾದಿತ ಸುಕೇಶ್ ಪೂಜಾರಿ, ಆಕಾಶ್ ಪೂಜಾರಿ, ರೋಶನ್, ಶಿವರಾಜ್ ಹಾಗೂ ಕಿರಣ್ ಎನ್ನುವರು ತಲವಾರು ದಾಳಿ ನಡೆಸಿದ್ದಲ್ಲದೇ ರಾಡು ಹಾಗೂ ದೊಣ್ಣೆಯಿಂದ ಥಳಿಸಿ ಕೊಲೆಗೆ ಯತ್ನಿಸಿದ್ದಾರೆ. ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಿಲೀಪ್ ತಿಳಿಸಿದ್ದಾನೆ. ತಲೆ, ಮುಖ, ದೇಹದ ಮೇಲೆ ಗಂಭೀರ ಗಾಯವಾಗಿದ್ದ ದೀಪಕ್‌ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೈಂದೂರು ಪೊಲೀಸರು ತನಿಕೆ ನಡೆಸಿದ್ದಾರೆ.

 

Leave a Reply