ಮರವಂತೆ: ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಸ್ಕಂದ ಸಂಸ್ಥೆಯ ಸಹಯೋಗದಲ್ಲಿ ಕ್ಷೇತ್ರ ವ್ಯಾಪ್ತಿಯ ವಿಶೇಷ ಅಗತ್ಯವಿರುವ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಮಂಗಳವಾರ ನಡೆಯಿತು. ಡೈಸ್ ಮತ್ತು ಇತರ ಸಮೀಕ್ಷೆಗಳಲ್ಲಿ ಗುರುತಿಸಲ್ಪಟ್ಟ ನ್ಯೂನತೆಯುಳ್ಳ ಮಕ್ಕಳು ಪೋಷಕರೊಂದಿಗೆ ಭಾಗವಹಿಸಿದ್ದರು. ಕುಂದಾಪುರ ಸರಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಶಿವಕುಮಾರ್, ನೇತ್ರ ತಜ್ಞ ಡಾ. ದಿನಕರ, ಕಿವಿ, ಮೂಗು, ಗಂಟಲು ತಜ್ಞ ಡಾ. ರಾಬರ್ಟ್ ರೆಬೆಲೊ, ಸ್ಕಂದ ಸಂಸ್ಥೆಯ ಡಾ. ಸಿ. ಎನ್. ಸುದರ್ಶನ ಮಕ್ಕಳ ತಪಾಸಣೆ ನಡೆಸಿ ಅವರಿಗೆ ಅಗತ್ಯವಿರುವ ಚಿಕಿತ್ಸೆ, ಸೌಲಭ್ಯ ಸೂಚಿಸಿದರು.
ಜಿಲ್ಲಾ ಉಪ ಯೋಜನಾಧಿಕಾರಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ಶಾಲೆಯ ಮುಖ್ಯೋಪಾಧ್ಯಾಯ ಜಿ. ಆನಂದ್ ಮತ್ತು ಸಿಬ್ಬಂದಿ ಸಹಕಾರ ನೀಡಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯತ್ ಸದಸ್ಯ ಮಹೇಂದ್ರಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಶಿಬಿರಕ್ಕೆ ಭೇಟಿ ನೀಡಿದರು.