ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಕೋವಿಡ್ ಪಾಸಿಟಿವ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗುತ್ತಿದೆ. ಆಸ್ಪತ್ರೆಯ ಸೇವೆಗಳನ್ನು ತ್ಕಾಲಿಕವಾಗಿ ಕೋಟ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಹಳೆಯ ವಿನಯ ಆಸ್ಪತ್ರೆಯಲ್ಲಿ ಒಪಿಡಿಯನ್ನು ಆರಂಭಿಸುತ್ತಿದ್ದು, ಗರ್ಭಿಣಿಯರು ಹಾಗೂ ಬಾಣಂತಿರಯನ್ನು ಕೋಟ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅವರು ಮಂಗಳವಾರ ಕುಂದಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಮಾತನಾಡಿ, ಕಳೆದ ಎರಡು ದಿನಗಳಲ್ಲಿ ಬಾಕಿ ಇದ್ದ 3000 ವರದಿಗಳು ಬಂದಿದ್ದು, ಹಾಗಾಗಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು 400 ಬೆಡ್ ಆಸ್ಪತ್ರೆಯನ್ನು ಮಾಡಲು ಯೋಜಿಸಲಾಗಿದೆ. ಕುಂದಾಪುರದಲ್ಲಿ ಈಗಾಗಲೇ 120 ಬೆಡ್ ಕೋವಿಡ್ ಆಸ್ಪತ್ರೆಯಿದ್ದು, ಅದನ್ನು ಪೂರ್ಣಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆ ಮಾಡಲಾಗುವುದು. ಆದರ್ಶ ಆಸ್ಪತ್ರೆಯಲ್ಲಿ 65 ಬೆಡ್ ಇದೆ. ಬೈಂದೂರು ತಾಲೂಕಿನಲ್ಲಿಯೂ ಹೆಚ್ಚಿನ ಪ್ರಕರಣ ವರದಿಯಾಗುತ್ತಿರುವುದರಿಂದ ಕೊಲ್ಲೂರು ಲಲಿತಾಂಬಿಕಾ ಗೆಸ್ಟ್ ಹೌಸನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗುತ್ತಿದೆ. ಕೋರೋನಾ ಲಕ್ಷಣಗಳನ್ನು ಇಲ್ಲದೇ ಪಾಸಿಟಿವ್ ಬರುವವರನ್ನು ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಹೋಂ ಕ್ವಾರಂಟೈನ್ ಇರುವವರು ಎಲ್ಲೆಂದರಲ್ಲಿ ತಿರುಗಾಡಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುತ್ತದೆ. ವರದಿ ನೆಗೆಟಿವ್ ಬರುವ ತನಕವೂ ಅವರು ಹಾಗೂ ಅವರ ಮನೆಯವರು ಜಾಗೃತಿಯಿಂದ ಇರಬೇಕು. ಇಲ್ಲದಿದ್ದರೆ ಪ್ರಾಥಮಿಕ ಸಂಪರ್ಕ ಹುಡುಕುವುದು ಕಷ್ಟವಾಗುತ್ತದೆ ಎಂದಿವರು ಅವರು ಕೋವಿಡ್ ಸಮುದಾಯಕ್ಕೆ ಹರಡಬಾರದು ಎಂಬ ಉದ್ದೇಶದಿಂದ ಕಂಟೈನ್’ಮೆಂಟ್ ಝೋನ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದಿದ್ದಾರೆ.
ಪಾಸಿಟಿವ್ ಹೆಚ್ಚಿಗೆ ಬರುವುದು ನಿರೀಕ್ಷಿತ: ಹಾಲಾಡಿ
ಜಿಲ್ಲೆಯಲ್ಲಿ ಹೆಚ್ಚಿನ ಕೊರೋನಾ ಪಾಸಿಟಿವ್ ಬರುವ ನಿರೀಕ್ಷೆ ಮೊದಲೇ ಇತ್ತು. ಹಾಗಾಗಿ ಅದಕ್ಕೆ ಅಗತ್ಯವಾದ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಸರಕಾರ ಐಸಿಎಂಆರ್ ನಿರ್ದೇಶನದಂತೆ ಕ್ವಾರಂಟೈನ್ ಅವಧಿ ಕಡಿಮೆಗೊಳಿಸಿದೆ. ಅದರಂತೆ ಸರಕಾರಿ ಕ್ವಾರಂಟೈನ್ ಇದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದರಿಗೆ ಚಿಕಿತ್ಸೆ ನೀಡಲು ಎಲ್ಲಾ ತಯಾರಿಯನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:
► ಹೆಚ್ಚುತ್ತಿರುವ ಕೊರೋನಾ ಸೋಂಕು, ಆತಂಕ. ಜಿಲ್ಲಾಡಳಿತದ ಕೈಮೀರುತ್ತಿದೆಯೇ ಕೊರೋನಾ ನಿಯಂತ್ರಣ? – https://kundapraa.com/?p=38142 .
► ಕೊರೋನಾ ಮಹಾಸ್ಪೋಟ: ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 210 ಪಾಸಿಟಿವ್? – https://kundapraa.com/?p=38160 .