ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಗೆ ಕುಂದಾಪುರ ನಗರ ಪ್ರದೇಶದಲ್ಲಿ ಅವಾಂತರಗಳನ್ನು ಸೃಷ್ಟಿಯಾಗಿದೆ. ರಾತ್ರಿ ನಿರಂತವಾಗಿ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ – 66ರ ಬಸ್ರೂರು ಮೂರುಕೈ ಸಮೀಪ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಹೆದ್ದಾರಿ ಬದಿಯ ತೋಡುಗಳು ಬ್ಲಾಕ್ ಆಗಿದ್ದರಿಂದ ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದ ವಿನಾಯಕ ಟಾಕೀಸ್ ತನಕ ರಸ್ತೆ ಮೇಲೆಯೇ ನೀರು ತುಂಬಿ ಹರಿಯುತ್ತಿದ್ದು, ಬಹಳ ಹೊತ್ತು ವಾಹನ ಸಂಚಾರ ಅಸ್ಥವ್ಯಸ್ಥವಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಪ್ಲೈಓವರ್, ಡಿವೈಡರ್ ಕಾಮಗಾರಿಗಳು ಅರ್ದಕ್ಕೆ ನಿಂತಿದೆ. ಅದು ಪೂರ್ಣಗೊಳ್ಳುವ ತನಕ ಅವಾಂತರ ತಪ್ಪಿದ್ದಲ್ಲ.
ಪ್ರತಿಭಾರಿಯಂತೆಯೇ ಮಳೆಗಾಲ ಬರುವ ತನಕವೂ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು, ಈ ಭಾರಿಯೂ ಅದನ್ನೂ ಸಾಕ್ಷೀಕರಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಕೊರೋನಾ ನಡುವೆ ಬಹಳಷ್ಟು ಗ್ರಾಮಗಳನ್ನು ಈವರೆಗೆ ಮಳೆಗಾಲದ ತಯಾರಿಯೇ ನಡೆದಿಲ್ಲ. ಇದು ಇನ್ನಷ್ಟು ಅವಾಂತರ ಸೃಷ್ಟಿಸುವ ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡುಬೇಕಿದೆ.
ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಬದಿಯ ತೋಡುಗಳಲ್ಲಿ ಬ್ಲಾಕ್ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/















